Composer : Shri Prasannavenkata dasaru
ಕರುಣಿಯೆಂಬೆ ಕರುಣಾ ನಿಧಿಯೆಂಬೆ
ಶರಣು ಶರಣೆಂಬೆ ಸ್ವಾಮಿ ಸ್ವಾಮಿ |
ಪರಮ ಭಾಗವತರ ಅರಿಗಳ ತರಿದು ನೀ
ನರಕ ತಪ್ಪಿಸಿ ನಿಜಪುರಕೊಯ್ಯುವೆಯೆಂದು [ಅ.ಪ.]
ತಾಯಿಯೆಂಬೆ ಎನ್ನ ತವರೂರೆಂಬೆ
ತ್ರಾಹಿ ತ್ರಾಹಿ ಎಂಬೆ ಸ್ವಾಮಿ
ಬಾಯೆಂಬೆ ಮಾನವರ ಅಘ ಕಾಣಿಸುತಿರೆ
ನೀಯಜಾಮಿಳಗೆ ಅಭಯವಿತ್ತೆಯೆಂಬೆ (೧)
ತಾತನೆಂಬೆ ಎನಗಾಪ್ತನೆಂಬೆ
ನಾಥಾ ನೀ ಎಂಬೆ ಸ್ವಾಮಿ
ಪಾತಕ ಕೌರವರ ಆತಂಕ ಬಿಡಿಸಿ ಸಂ
ಪ್ರೀತಿಲಿ ಪಾಂಡವರ ಮಾನ ಕಾಯ್ದೆಯೆಂಬೆ (೨)
ಏಕಾನೆಂಬೆ ಅನೇಕಾನೆಂಬೆ
ಸಾಕು ಸಾಕೆಂಬೆ ಸ್ವಾಮಿ
ಶ್ರೀಕಾಂತ ಪ್ರಸನ್ವೆಂಕಟೇಕಾಂತ ದಾಸರ
ಬೇಕಾಗಿ ದಡ ನೂಕುವೆಯೆಂದು (೩)
karuNiyeMbe karuNA nidhiyeMbe
SaraNu SaraNeMbe svAmi svAmi |
parama BAgavatara arigaLa taridu nI
naraka tappisi nijapurakoyyuveyeMdu [a.pa.]
tAyiyeMbe enna tavarUreMbe
trAhi trAhi eMbe svAmi
bAyeMbe mAnavara aGa kANisutire
nIyajAmiLage abhayavitteyeMbe (1)
tAtaneMbe enagAptaneMbe
nAthA nee eMbe svAmi
pAtaka kauravara AtaMka biDisi saM
prItili pAMDavara mAna kAydeyeMbe (2)
EkAneMbe anEkAneMbe
sAku sAkeMbe svAmi
SrIkAMta prasanveMkaTEkAMta dAsara
bEkAgi daDa nUkuveyeMdu (3)
Leave a Reply