Karunakara neenembuvadyatako

Composer : Shri Purandara dasaru

By Smt.Shubhalakshmi Rao

ಕರುಣಾಕರ ನೀನೆಂಬುವದ್ಯಾತಕೊ |
ಭರವಸೆ ಇಲ್ಲೆನಗೆ [ಪ]
ಪರಿ ಪರಿಯಲಿ ಈ ನರ ಜನ್ಮವನೆತ್ತಿ ತಿರುಗಿ ತಿರುಗಿ
ಮನ ಕರಗಿಸುವುದ ಕಂದು {ಅ.ಪ}

ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ |
ಪೊರೆದವ ನೀನಂತೆ ||
ಅರಿತು ವಿಚಾರಿಸಿ ನೋಡಲದೆಲ್ಲವು |
ಪರಿಪರಿ ಕಂತೆಗಳಂತಿದೆ ಕೃಷ್ಣ [೧]

ಕರುಣಾಕರ ನೀನಾದರೆ ಈಗಲೆ |
ಕರಪಿಡಿದೆನ್ನನು ಹರಿ ಕಾಯೊ ||
ಸರಸಿಜಾಕ್ಷನೇ ಸರಸ ನೀನಾದರೆ |
ದುರಿತಗಳೆನ್ನನು ಪೀಡಿಪುದುಂಟೆ [೨]

ಮರಣ ಕಾಲದಲಿ ಅಜಮಿಳಗೊಲಿದೆ |
ಗರುಡಧ್ವಜನೆಂಬ ಬಿರುದಿನಿಂದ ||
ವರ ಬಿರುದುಗಳು ಉಳಿಯಬೇಕಾದರೆ |
ತ್ವರಿತದಿ ಕಾಯೋ ಪುರಂದರವಿಠಲ [೩]


karuNAkara nIneMbuvadyAtako |
Baravase illenage [pa]
pari pariyali I nara janmavanetti tirugi tirugi
mana karagisuvuda kaMdu {a.pa}

kari dhruva bali pAMcAli ahalyeya |
poredava nInaMte ||
aritu vicArisi nODaladellavu |
paripari kaMtegaLaMtide kRuShNa [1]

karuNAkara nInAdare Igale |
karapiDidennanu hari kAyo ||
sarasijAkShanE sarasa nInAdare |
duritagaLennanu pIDipuduMTe [2]

maraNa kAladali ajamiLagolide |
garuDadhvajaneMba birudiniMda ||
vara birudugaLu uLiyabEkAdare |
tvaritadi kAyO puraMdaraviThala [3]

Leave a Reply

Your email address will not be published. Required fields are marked *

You might also like

error: Content is protected !!