Composer : Shri Purandara dasaru
ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ||
ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ||
ಅಡಿಗೆಯ ಮನೆಯಲ್ಲಿ ಗಡಬಡ ಬರುವುದು
ಗಡಿಗೆ ಒಡೆದು ಹಾಲ್ ಮೊಸರ ಕುಡಿಯುವುದು |೧|
ಹಾಲ ಕುಡಿವ ಬಗೆ ಮೂಲೆಲಿ ಕೂತುಕೊಂಡು
ಹಾಲಿನ ಮೇಲಿನ ಕೆನೆ ಕಾಲಲಿ ತಿಂದು |೨|
ಹಾಗಲು ಹೀಗಲು ಮೀಸಲ್ ಹಾಕಿದ ಹಾಲು
ಪುರಂದರವಿಠಲಗೆ ಸೇರಿತು ಮಾಲು |೩|
kAbisi kAbisi myAM myAM myAM myAM ||pa||
mArjAlakATavannu taDeyalArevu kRuShNa ||a||
aDigeya maneyalli gaDabaDa baruvudu
gaDige oDedu hAl mosara kuDiyuvudu |1|
hAla kuDiva bage mUleli kUtukoMDu
hAlina mElina kene kAlali tiMdu |2|
hAgalu hIgalu mIsal hAkida hAlu
puraMdaraviThalage sEritu mAlu |3|
Leave a Reply