Govinda govinda Rama

Composer : Shri Vadirajaru

By Smt.Shubhalakshmi Rao

ಗೋವಿಂದ ಗೋವಿಂದ ರಾಮ |
ಗೋವಿಂದ ನಾರಾಯಣ ||

ಗೋವಿಂದ ಗೋಪಾಲಕೃಷ್ಣ !
ಗೋವಿಂದ ನಾರಾಯಣ [ಪ]

ಸೋಮಾಸುರನೆಂಬ ದೈತ್ಯ |
ಸಾಮಕ ವೇದವನೊಯ್ಯಲುಮ |
ಸೋಮಾಸುರನನ್ನು ಕೊಂದು |
ಸಾಮಕವೇದವ ತಂದನುಮ [೧]

ಗುಡ್ಡವು ಮುಳುಗಿ ಪೋಗಲು ನಮ್ಮ ದೇವ |
ಗುಡ್ಡವ ಬೆನ್ನಲಿ ಪೊತ್ತನುಮ ||
ಗುಡ್ಡದಂತ ಅಸುರರನೆಲ್ಲ |
ಅಡ್ಡಗೆಡಹಿ ಬಿಸುಟನುಮ [೨]

ಚಿನ್ನಗಣ್ಣಿನವನು ಬಂದು |
ಕನ್ನೆ ಹೆಣ್ಣನೊಯ್ಯಲುಮ ||
ವರ್ಣರೂಪವ ತಾಳಿ ಅಸುರನ |
ಛಿನ್ನಭಿನ್ನವ ಬಗಿದನುಮ [೩]

ಕಂಬದಿಂದಲಿ ಉದಿಸಿ ನಮ್ಮ ದೇವ |
ಜಂಬದಸುರನ ಬಗಿದನುಮ |
ನಂಬಿದ ಪ್ರಹ್ಲಾದನ್ನ ಕಾಯಿದ |
ಅಂಬುಜನಾಭ ನೃಸಿಂಹನುಮ [೪]

ಬಲು ಮುರುಡನ್ನಾಗಿ ಭೂಮಿಯ
ಬಲಿಯ ದಾನವ ಬೇಡಿದನುಮ |
ಇಳೆಯ ಈರಡಿಯ ಮಾಡಿ |
ಬಲಿಯ ಪಾತಾಳಕ್ಕೊತ್ತಿದನುಮ [೫]

ಕೊಡಲಿಯನ್ನು ಪಿಡಿದು ನಮ್ಮ ದೇವ |
ಕಡಿದ ಕ್ಷತ್ರಿಯರನುಮ ||
ಪಡೆದ ತಾಯ ಶಿರವ ತರಿದು |
ಪಡೆದನಾಕೆಯ ಪ್ರಾಣನುಮ [೬]

ಎಂಟೆರಡು ತಲೆಯಾದಸುರನ |
ಕಂಠವ ಛೇಡಿಸಿ ಬಿಸುಟನುಮ |
ಒಂಟಿ ರೂಪವ ತಾಳಿ ಲಂಕೆಯ |
ಬಂಟ ವಿಭೀಷಣಗಿತ್ತನುಮ [೭]

ಸೋಳಸಾಸಿರ ಗೋಪಿಯರೊಡನೆ |
ಕೇಳಮೇಳದೊಳಿಪ್ಪನುಮ |
ಬಾಲಕನಾಗಿ ತನ್ನ ರೂಪದಲ್ಲಿ ಶ್ರೀ |
ಲೋಲ ಲಕ್ಷುಮಿಯರಸನುಮ [೮]

ಒಪ್ಪದಿಂದಲಿ ಬಂದು ನಮ್ಮ ದೇವ |
ಇಪ್ಪೆವನದೊಳಗಿಪ್ಪನುಮ |
ಸರ್ಪ ಶರನ್ನಾಗಿ ಪೋಗಿ
ತ್ರಿಪುರ ಸಂಹಾರ ಮಾಡಿದನುಮ [೯]

ಯಲಮ ಯಲಮ ಯಲಮ ನಮ್ಮ ದೇವ |
ಬಲ್ಲಿದ ಕಲ್ಕ್ಯವತಾರನುಮ |
ಇಳೆಯ ಸ್ವರ್ಗ ಪಾತಾಳಕೊಡೆಯ |
ಚೆಲುವ ಶ್ರೀಹಯವದನನುಮ [೧೦]


gOviMda gOviMda rAma |
gOviMda nArAyaNa ||

gOviMda gOpAlakRuShNa !
gOviMda nArAyaNa [pa]

sOmAsuraneMba daitya |
sAmaka vEdavanoyyaluma |
sOmAsuranannu koMdu |
sAmakavEdava taMdanuma [1]

guDDavu muLugi pOgalu namma dEva |
guDDava bennali pottanuma ||
guDDadaMta asuraranella |
aDDageDahi bisuTanuma [2]

cinnagaNNinavanu baMdu |
kanne heNNanoyyaluma ||
varNarUpava tALi asurana |
ChinnaBinnava bagidanuma [3]

kaMbadiMdali udisi namma dEva |
jaMbadasurana bagidanuma |
naMbida prahlAdanna kAyida |
aMbujanABa nRusiMhanuma [4]

balu muruDannAgi BUmiya
baliya dAnava bEDidanuma |
iLeya IraDiya mADi |
baliya pAtALakkottidanuma [5]

koDaliyannu piDidu namma dEva |
kaDida kShatriyaranuma ||
paDeda tAya Sirava taridu |
paDedanAkeya prANanuma [6]

eMTeraDu taleyAdasurana |
kaMThava CEDisi bisuTanuma |
oMTi rUpava tALi laMkeya |
baMTa viBIShaNagittanuma [7]

sOLasAsira gOpiyaroDane |
kELamELadoLippanuma |
bAlakanAgi tanna rUpadalli SrI |
lOla lakShumiyarasanuma [8]

oppadiMdali baMdu namma dEva |
ippevanadoLagippanuma |
sarpa sharannAgi pOgi
tripura saMhAra mADidanuma [9]

yalama yalama yalama namma dEva |
ballida kalkyavatAranuma |
iLeya svarga pAtALakoDeya |
celuva SrIhayavadananuma [10]

Leave a Reply

Your email address will not be published. Required fields are marked *

You might also like

error: Content is protected !!