Chitravagide Nodu

Composer : Shri Varadagopala vittala

By Smt.Shubhalakshmi Rao

Shri Varadendra Tirtharu : 1761-1785
vaadE vijayasheelaaya varadaaya varaarthinaaM|
vadaanyajanasiMhaaya varadEMdraaya tE nama:|
ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|
ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|
Ashrama Gurugalu – Vasudendra Theertharu
Ashrama Shishyaru – Sri Bhuvanendra Theertharu
Vrundavana – Poona
Aradhana – Ashada Shukla Shashti


ಚಿತ್ರವಾಗಿದೆ ನೋಡು ನಮಗೆ |
ಸತ್ಯ ಗುಣಸಾಂದ್ರ ವರದೇಂದ್ರ |
ಯತಿಗಳ ಮಹಿಮೆ || ಪ ||

ವಿದ್ವದ್ವಿಶೇಷಕ್ಕೆ ಶೇಷ
ತಲೆದೂಗಿದನು |
ಸದ್ವ್ರಯದ ದಾನಕೆ
ಕರ್ಣನ ಮೀರಿದಾ |
ಬುದ್ಧಿಯಲಿ ಧೀಕ್ಷಣ
ಮನ್ನಿಸಿದಾ ಸದಾಚಾರ |
ಪದ್ಧತಿಯ ನೋಡಿ ಬ್ರಹ್ಮನು
ಸಮ್ಮತಿಸಿದ ಬಲು || ೧ ||

ಸರ್ವಜ್ಞತಾ ಗುಣಕೆ ಶರ್ವ
ಬಲು ಶ್ಲಾಘಿಸಿದ |
ಊರ್ವಿ ಪೊಗಳಿದಳಿವರ
ಕ್ಷಮೆ ಧರ್ಮಕೇ |
ಸರ್ವದಾ ಧೈರ್ಯ
ಗಾಂಭೀರ್ಯಕೆ ಮಹಾ | ಹಿಮ |
ಪರ್ವತಾಭ್ಧಿಗಳು ಸೈ
ಸೈಯೆಂದವರಿಕೊ || ೨ ||

ವರದ ಗೋಪಾಲವಿಠಲನ
ವಲಿಮಿಂದ | ಶ್ರೀ |
ವರದೇಂದ್ರ ಯತಿ
ವರಪ್ರದ ಮಹಿಮೆಗೆ |
ಸುರಧೇನು ಕಲ್ಪತರು
ವರ ಚಿಂತಾರತುನಗಳು |
ಸ್ವರ್ಗ ಲೋಕದಲ್ಲಿ
ಬೆರಗಾದವಿದಕೊ || ೩ ||


citravAgide nODu namage |
satya guNasAMdra varadEMdra |
yatigaLa mahime || pa ||

vidvadviSEShakke SESha
taledUgidanu |
sadvrayada dAnake
karNana mIridA |
buddhiyali dhIkShaNa
mannisidA sadAcAra |
paddhatiya nODi brahmanu
sammatisida balu || 1 ||

sarvaj~jatA guNake Sarva
balu SlAGisida |
Urvi pogaLidaLivara
kShame dharmakE |
sarvadA dhairya
gAMBIryake mahA | hima |
parvatABdhigaLu sai
saiyeMdavariko || 2 ||

varada gOpAlaviThalana
valimiMda | SrI |
varadEMdra yati
varaprada mahimege |
suradhEnu kalpataru
vara ciMtAratunagaLu |
svarga lOkadalli
beragAdavidako || 3 ||

Leave a Reply

Your email address will not be published. Required fields are marked *

You might also like

error: Content is protected !!