Composer : Shri Vijayadasaru
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ [ಪ]
ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ [ಅ.ಪ.]
ಊದುವ ಸಿರಿ ಪೊಂಗೊಳಲೊ ಜಗ-|
ದಾಧಾರದ ನಿಜ ಹೊಳೆಯೋ ||
ಪಾದದ ಪೊಂಗೆಜ್ಜೆ ಥಳಿಲೊ ಸರ್ವ |
ವೇದಗಳರಸುವ ಕಲ್ಪಕ ಸೆಳಲೊ (೧)
ಕಸ್ತೂರಿ ತಿಲಕದ ಮದವೊ ಮು-
ಕುಟ ಮಸ್ತಕದಿ ಝಗಝಗವೊ ||
ವಿಸ್ತರದಿ ಪೊತ್ತ ಜಗವೊ ಪರ- |
ವಸ್ತುವು ನಂದ ಯಶೋದೆಯ ಮಗುವೊ (೨)
ನವನೀತವ ಪಿಡಿದ ಕರವೊ ನವ-|
ನವ ಮೋಹನ ಶೃಂಗಾರವೊ ||
ಅವತರಿಸಿದ ಸುರತರುವೊ ಶತ-
ರವಿಯಂದದಿ ಉಂಗುರವಿಟ್ಟ ಭರವೊ (೩)
ಆನಂದ ಜ್ಞಾನದ ಹೃದವೊ ಶುಭ-|
ಮಾನವರಿಗೆ ಬಲು ಮೃದುವೊ ||
ಆನನ ಛವಿಯೊಳು ಮಿದುವೊ ಪಾಪ-|
ಕಾನನ ದಹಿಸುವ ಪಾವಕ ಪದವೊ (೪)
ತ್ರಿಜಗದಧಿಕ ಪಾವನನೊ ಪಂ-|
ಕಜ ನೇತ್ರೆಯ ನಾಯಕನೊ ||
ಅಜಭವಾದಿಗಳ ಜನಕನೊ ನಮ್ಮ |
ವಿಜಯವಿಠ್ಠಲ ಯದುಕುಮಾರಕನೊ (೫)
mAtanADai mannAri kRuShNa mAtanADai [pa]
dAtanu nIneMdu bayasi baMdenu mAtanADai [a.pa.]
Uduva siri poMgoLalo jaga-|
dAdhArada nija hoLeyO ||
pAdada poMgejje thaLilo sarva |
vEdagaLarasuva kalpaka seLalo (1)
kastUri tilakada madavo mu-
kuTa mastakadi JagaJagavo ||
vistaradi potta jagavo para- |
vastuvu naMda yaSOdeya maguvo (2)
navanItava piDida karavo nava-|
nava mOhana SRuMgAravo ||
avatarisida surataruvo Sata-
raviyaMdadi uMguraviTTa Baravo (3)
AnaMda j~jAnada hRudavo SuBa-|
mAnavarige balu mRuduvo ||
Anana CaviyoLu miduvo pApa-|
kAnana dahisuva pAvaka padavo (4)
trijagadadhika pAvanano paM-|
kaja nEtreya nAyakano ||
ajaBavAdigaLa janakano namma |
vijayaviThThala yadukumArakano (5)
Leave a Reply