Kandu dhanyanade nanda

Composer : Shri Harapanahali Bheemavvanavaru

By Smt.Shubhalakshmi Rao

ಕಂಡು ಧನ್ಯನಾದೆ ನಂದ ತನಯನ ಕಣ್ಣಾರೆ ನಾ |
ಕಂಡು ಧನ್ಯನಾದೆ ನಂದ ತನಯನ |ಅ.ಪ|

ಕಂಡು ಧನ್ಯನಾದೆ ದಣಿ-ಯವೆನ್ನವೆರಡು ಕಂಗಳೀಗ |
ತಿರುಗಿ ಪೊಗಲಾರೆ ತಿಮ್ಮಲಾಪುರೀಶ ದೊರೆಯ ಬಿಟ್ಟು || ೧ ||

ಸಾಲು ದೀವಿಗೆ ಸಣ್ಣ ನಾಮ ಸರದ ಮಧ್ಯೆ ವೈಜಯಂತೀ |
ಸೂರ್ಯನಂತೆ ಪೊಳೆವ ಮುದ್ದು ಮುಖವು ಮಹಾದ್ವಾರದಲ್ಲೇ || ೨ ||

ಶಂಖ ಚಕ್ರ ಶ್ಯಾಮ ವರ್ಣ ಅಂಕಿತವುಳ್ಳ ನಾಮಗಳಿಂದ |
ಪಂಕಜಾಕ್ಷ ಪರಮಪುರುಷ ವೆಂಕಟನೆಂಬೊ ನಾಮಾಂಕಿತನಾದವನ || ೩ ||

ಆ ಮಹಾ ವೈಕುಂಠದಲ್ಲಾ-ವಾಸವಾದ ನಮ್ಮ | ಕುಲ |
ಸ್ವಾಮಿ ಯೆನಿಸಿಕೊಂಡ ಭೀಮೇಶಕೃಷ್ಣನ ದಯದಿಂದೀಗ || ೪ ||


kaMDu dhanyanAde naMda tanayana kaNNAre nA |
kaMDu dhanyanAde naMda tanayana |a.pa|

kaMDu dhanyanAde daNi-yavennaveraDu kaMgaLIga |
tirugi pogalAre timmalApurISa doreya biTTu || 1 ||

sAlu dIvige saNNa nAma sarada madhye vaijayaMtI |
sUryanaMte poLeva muddu muKavu mahAdvAradallE || 2 ||

SaMKa cakra SyAma varNa aMkitavuLLa nAmagaLiMda |
paMkajAkSha paramapuruSha veMkaTaneMbo nAmAMkitanAdavana || 3 ||

A mahA vaikuMThadallA-vAsavAda namma | kula |
svAmi yenisikoMDa BImESakRuShNana dayadiMdIga || 4 ||

Leave a Reply

Your email address will not be published. Required fields are marked *

You might also like

error: Content is protected !!