Yashode ninna kandage

Composer : Shri Purandara dasaru

By Smt.Shubhalakshmi Rao

ಯಶೋದೆ ನಿನ್ನ ಕಂದಗೆ ಏಸು ರೂಪವೆ ||ಪ||
ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ ||ಅ||

ಹಸುಗಳ ಕರೆವಲ್ಲಿ ಹಲವು ರೂಪ ತೋರುವ
ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ
ಮೊಸರ ಕಡೆಯುವಲ್ಲಿ ಮುಂದೆ ತಾ ನಿಂದಿರುವ
ಹಸನಾಗಿ ಮೋಸ ಮಾಡಿ ಬೆಣ್ಣೆಯ ಮೆಲುವ |೧|

ಒಬ್ಬರ ಮನೆಯಲಿ ಮಲಗಿ ತಾನಿರುವ
ಒಬ್ಬರ ಮನೆಯಲಿ ಬೆಣ್ಣೆ ಕದ್ದು ಮೆಲುವ
ಒಬ್ಬರ ಮನೆಯಲಿ ರತಿ ಕ್ರೀಡೆಯಾಡುತಿರುವ
ಒಬ್ಬರ ಮನೆಯಲಿ ಪುಟ್ಟ ಚೆಂಡಾಡುವ |೨|

ಹಿಂದೆ ತಾ ನಿಂದಿರುವ ಮುಂದೆ ಹೋಗುತ್ತಿರುವ
ಇಂದುಮುಖಿಯರ ಕೂಡೆ ಸರಸವಾಡುವ
ಬಂದು ನೋಡೆ ಯಶೋದೆ ಬಣ್ಣದ ಮಾತಲ್ಲ
ನಂದಗೋಪನ ಕಂದ ಪುರಂದರ ವಿಠಲ |೩|


yaSOde ninna kaMdage Esu rUpave ||pa||
SiSuvalla ninna maga kRuShNa jagatpatiye ||a||

hasugaLa karevalli halavu rUpa tOruva
bisiya hAliDuvalli benna hiMde iruva
mosara kaDeyuvalli muMde tA niMdiruva
hasanAgi mOsa mADi beNNeya meluva |1|

obbara maneyali malagi tAniruva
obbara maneyali beNNe kaddu meluva
obbara maneyali rati krIDeyADutiruva
obbara maneyali puTTa ceMDADuva |2|

hiMde tA niMdiruva muMde hOguttiruva
iMdumuKiyara kUDe sarasavADuva
baMdu nODe yaSOde baNNada mAtalla
naMdagOpana kaMda puraMdara viThala |3|

Leave a Reply

Your email address will not be published. Required fields are marked *

You might also like

error: Content is protected !!