Composer : Shri Prasannavenkata dasaru
ಯಾಕೆ ಕಿರಿಕಿರಿ ಮಾಡುತಿ ನೀ –
ನ್ಯಾಕೆ ಕಿರಿಕಿರಿ ಮಾಡುತಿ || ಪ ||
ಭಕ್ತವತ್ಸಲ ಭಯನಿವಾರಣ ಬಟ್ಟಲು ಬಾರಿಸಲೇನೋ || ಅ.ಪ ||
ನೀರೊಳು ಮುಳುಗಿದೆ ಏನೋ ನಿನಗೆ ನೆಗಡಿಯಾಯಿತೇನೋ |
ಭಾರವ ಪೊತ್ತು ನಿನ್ನ ಬೆನ್ನು ನೊಂದದೇನೋ ||
ಧಾರುಣಿ ಬಗೆದು ನಿನ್ನ ದಾಡಿ ನೊಂದದೇನೋ |
ದುರುಳ ಹಿರಣ್ಯಕನ ಬಗೆದು ಬೆರಳು ನೊಂದಾವೇನೋ || ೧ ||
ಭೂಮಿಯ ಅಳೆದು ನಿನ್ನ ಪಾದ ನೊಂದಾವೇನೋ |
ರಾಯರಾಯರ ಗೆದ್ದು ಬಾಹು ನೊಂದಾವೇನೋ ||
ಸೇತುವೆ ಕಟ್ಟಿ ನಿನ್ನ ರಟ್ಟೆ ನೊಂದಾವೇನೋ |
ಅಷ್ಟಮಹಿಶಿಯರನ್ನಾಳಿ ತೋಳು ನೊಂದಾವೇನೋ || ೨ ||
ಬತ್ತಲೆ ನಿಂದು ನಿನಗೆ ಚಳಿಯಾಯಿತೇನೋ |
ಉತ್ತಮ ತೇಜಿಯನೇರಿ ಪಿತ್ತ ಹತ್ತಿತೇನೋ ||
ನಾರದ ಗುರುವಿಗೆ ನಾನು ಹೇಳಿ ಕಳುಹಿಸಲೇನೋ |
ಮಾಯದ ಕಪ್ಪು ನಿನ್ನ ಮೋರೆಗೆ ಹಚ್ಚಿಸಲೇನೋ |
ಬಾಲ ಲಕುಮಿಲೋಲ, ಪ್ರಸನ್ನವೆಂಕಟ ಕೃಷ್ಣ || ೩ ||
yAke kirikiri mADuti nI –
nyAke kirikiri mADuti || pa ||
Baktavatsala BayanivAraNa baTTalu bArisalEnO || a.pa ||
nIroLu muLugide EnO ninage negaDiyAyitEnO |
BArava pottu ninna bennu noMdadEnO ||
dhAruNi bagedu ninna dADi noMdadEnO |
duruLa hiraNyakana bagedu beraLu noMdAvEnO || 1 ||
BUmiya aLedu ninna pAda noMdAvEnO |
rAyarAyara geddu bAhu noMdAvEnO ||
sEtuve kaTTi ninna raTTe noMdAvEnO |
aShTamahishiyarannALi tOLu noMdAvEnO || 2 ||
battale niMdu ninage caLiyAyitEnO |
uttama tEjiyanEri pitta hattitEnO ||
nArada guruvige nAnu hELi kaLuhisalEnO |
mAyada kappu ninna mOrege haccisalEnO |
bAla lakumilOla, prasannaveMkaTa kRuShNa || 3 ||
Leave a Reply