Vidurana bhagyavidu

Composer : Shri Purandara dasaru

By Smt.Shubhalakshmi Rao

ವಿದುರನ ಭಾಗ್ಯವಿದು |
ಪದುಮಜಾಂಡ ತಲೆದೂಗುತಲಿದೆಕೊ [ಪ]

ಕುರುರಾಯನು ಖಳನನುಜನು ರವಿಜನು |
ಗುರುಗಾಂಗೇಯರು ಎದುರಿರಲು ||
ಹರಿಸಿ ರಥವ ನಡು ಬೀದಿಯಲ್ಲಿ ಬಹ |
ಹರಿಯನು ತಾನು ಕಂಡನು ಹರುಷದಲಿ (೧)

ದಾರಿಯಲಿ ಬಹ ಮುರವೈರಿಯ ಕಾಣುತ |
ಹಾರುತ ಚೀರುತ ಕುಣಿಯುತಲಿ ||
ವಾರಿಧಾರೆಯನು ನೇತ್ರದಿ ಸುರಿಸುತ |
ಬಾರಿಬಾರಿಗು ಹಿಗ್ಗುವ ಸುಖದಿ (೨)

ಆಟಕೆ ಲೋಕಗಳೆಲ್ಲಾ ಸೃಜಿಸುವ |
ನಾಟಕಧರ ತನ್ನ ಲೀಲೆಯಲಿ ||
ನೀಟಾದವರ ಮನೆಗಳ ಜರೆದು |
ಕುಟೀರದಲಿ ಬಂದು ಹರಿ ಕುಳಿತ (೩)

ಅಡಿಗಡಿಗೆ ತನ್ನ ತನುಮನ ಹರಹಿ |
ಅಡಗೆಡೆಯುತ ಬಲು ಗದ್ಗದದಿ ||
ನುಡಿಗಳ ತೊದಲಿಸಿ ರೋಮವ ಪುಳಕಿಸಿ |
ದುಡುದುಡು ಓಡುವ ದಶದಿಶೆಗೆ (೪)

ಕಂಗಳುದಕದಿ ಪದಂಗಳ ತೊಳೆದು |
ಗಂಧವ ಪೂಸಿದ ತನುಪೂರಸಿ ||
ಮಂಗಳ ಮಹಿಮನ ಚರಣಕೆರಗಿ ಪು-
ಷ್ಪಂಗಳಿಂದ ಪೂಜೆಯ ಮಾಡಿದನು (೫)

ನೋಡಿದ ಭಕುತನ ಮನದ ಹವಣಿಕೆಯು |
ಪಾಡುವ ಪೊಗಳುವ ಹರುಷದಲಿ ||
ನೀಡಿದ ಕರದಲಿ ಬಿಗಿದಪ್ಪಿದ ಕೊಂ –
ಡಾಡಿದ ಕರುಣದಿ ಜಗದೊಡೆಯ (೬)

ಕ್ಷೀರವಾರಿಧಿ ಶಯನಗೆ ವಿದುರನು |
ಕ್ಷೀರವನುಣ ಬಡಿಸಿದ ನೋಡಾ ||
ವಾರಿಜನಾಭನು ಕರಸಂಪುಟದಲಿ |
ಆರೋಗಣಿಸಿದ ಘನತೆಯನು (೭)

ಒಂದು ಕುಡಿತೆ ಪಾಲು ಹರಿ ತಾ ಸವಿದು |
ಮುಂದಕೆ ನಡೆಸಿದ ಧರೆಮೇಲೆ ||
ಇಂದಿರೆಯರಸನ ಚರಿತೆ ವಿಚಿತ್ರವು |
ಚೆಂದದಿ ಹರಿದುದು ಬೀದಿಯಲಿ (೮)

ಕರುಣಾಕರ ಸಿರಿಹರಿ ತನ್ನ ಭಕುತರ |
ಪೊರೆವನು ಅನುದಿನ ಆಯತದಿ ||
ಸಿರಿಯರಸು ನಮ್ಮ ಪುರಂದರ ವಿಠಲನ |
ಶರಣರು ಧನ್ಯರು ಧರೆ ಮೇಲೆ (೯)


vidurana BAgyavidu |
padumajAMDa taledUgutalideko [pa]

kururAyanu KaLananujanu ravijanu |
gurugAMgEyaru eduriralu ||
harisi rathava naDu bIdiyalli baha |
hariyanu tAnu kaMDanu haruShadali (1)

dAriyali baha muravairiya kANuta |
hAruta cIruta kuNiyutali ||
vAridhAreyanu nEtradi surisuta |
bAribArigu higguva suKadi (2)

ATake lOkagaLellA sRujisuva |
nATakadhara tanna lIleyali ||
nITAdavara manegaLa jaredu |
kuTIradali baMdu hari kuLita (3)

aDigaDige tanna tanumana harahi |
aDageDeyuta balu gadgadadi ||
nuDigaLa todalisi rOmava puLakisi |
duDuduDu ODuva daSadiSege (4)

kaMgaLudakadi padaMgaLa toLedu |
gaMdhava pUsida tanupUrasi ||
maMgaLa mahimana caraNakeragi pu-
ShpaMgaLiMda pUjeya mADidanu (5)

nODida Bakutana manada havaNikeyu |
pADuva pogaLuva haruShadali ||
nIDida karadali bigidappida koM –
DADida karuNadi jagadoDeya (6)

kShIravAridhi Sayanage viduranu |
kShIravanuNa baDisida nODA ||
vArijanABanu karasaMpuTadali |
ArOgaNisida Ganateyanu (7)

oMdu kuDite pAlu hari tA savidu |
muMdake naDesida dharemEle ||
iMdireyarasana carite vicitravu |
ceMdadi haridudu bIdiyali (8)

karuNAkara sirihari tanna Bakutara |
porevanu anudina Ayatadi ||
siriyarasu namma puraMdara viThalana |
SaraNaru dhanyaru dhare mEle (9)

Leave a Reply

Your email address will not be published. Required fields are marked *

You might also like

error: Content is protected !!