Composer : Shri Vyasarajaru
ಸೇರಿದೆನೋ ಸೇರಿದೆನೋ ಜಗದೀಶನ ” ,
ಶ್ರೀ ವ್ಯಾಸರಾಜರ ರಚನೆ , ರಾಗ ತಿಲಂಗ್ , ಖಂಡಛಾಪುತಾಳ
ರಾಗ: ತಿಲಂಗ್ ಖಂಡಛಾಪುತಾಳ
ಸೇರಿದೆನೋ ಸೇರಿದೆನೋ ಜಗದೀಶನ || ಪ ||
ನರಕಜನ್ಮದ ಭಯವು ಎನಗೆ ಇನಿತಿಲ್ಲ || ಅ ಪ ||
ನೇತ್ರಗಳು ಕೃಷ್ಣನ ಮೂರ್ತಿ ನೋಡುತಲಿವೆ |
ಶ್ರೋತ್ರಗಳು ಹರಿಕಥೆಯ ಕೇಳುತಲಿವೆ ||
ರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲ್ಲಿ |
ಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ || ೧ ||
ಹಸ್ತಗಳು ಮಂಟಪ ಶುದ್ಧಿಯನು ಮಾಡುತಿವೆ |
ಮಸ್ತಕವು ಹರಿಚರಣಕೆರಗುತಿದೆಕೋ ||
ವಿಸ್ತಾರವಾದ ಪ್ರದಕ್ಷಿಣೆಯ ಮಾಡುತಿದೆ |
ಕಸ್ತೂರಿ ತುಳಸಿಯನು ಮೂಗು ಆಘ್ರಾಣಿಸುತಿದೆ || ೨ ||
ಹರಿನಾಮ ಸ್ಮರಣೆಯನು ನುಡಿಯುತಿದೆ ಎನ್ನ ಜಿಹ್ವೆ |
ಹರಿಭಕುತಿ ಸುಧೆಯ ಪಾನಗಳಿಂದಲಿ ||
ಹರಿ ಪ್ರೀತಿಯಾಗಿದೆ ನೋಡಿದರೆನ್ನ ದೇಹ |
ಸಿರಿಕೃಷ್ಣರಾಯನ್ನ ಮನಮಂದಿರದಿ ಕಂಡೆ || ೩ ||
sEridenO sEridenO jagadISana ” ,
SrI vyAsarAjara racane , rAga tilaMg , KaMDaCAputALa
rAga: tilaMg KaMDaCAputALa
sEridenO sEridenO jagadISana || pa ||
narakajanmada Bayavu enage initilla || a pa ||
nEtragaLu kRuShNana mUrti nODutalive |
SrOtragaLu harikatheya kELutalive ||
rAtri hagalu enna manasu SrIraMganalli |
pAtravADutidenna gAtra kRuShNana muMde || 1 ||
hastagaLu maMTapa Suddhiyanu mADutive |
mastakavu haricaraNakeragutidekO ||
vistAravAda pradakShiNeya mADutide |
kastUri tuLasiyanu mUgu AGrANisutide || 2 ||
harinAma smaraNeyanu nuDiyutide enna jihve |
hariBakuti sudheya pAnagaLiMdali ||
hari prItiyAgide nODidarenna dEha |
sirikRuShNarAyanna manamaMdiradi kaMDe || 3 ||
Leave a Reply