Ninna Maganene Gopi

Composer : Shri Vyasarajaru

By Smt.Nandini Sripad

ನಿನ್ನ ಮಗನೇನೆ ಗೋಪಿ || ಪ ||
ಚೆನ್ನಾರಿ ಚೆಲುವ ಉಡುಪಿನ ಕೃಷ್ಣರಾಯ || ಅ ಪ ||

ಮುಂಗುರುಳು ಮುಂದಲೆಗೆ ಭಂಗಾರದರಳೆಲೆ |
ರಂಗು ಮಾಣಿಕದ ಉಂಗುರವನಿಟ್ಟು ||
ಪೊಂಗೆಜ್ಜೆ ತೊಡರು ಅಂದಿಗೆ ಘಲು ಘಲುರೆನೆ |
ಅಂಗಳದೊಳಾಡುವನು ಈ ಮುದ್ದುಬಾಲ || ೧ ||

ಕಟಿವಾಯಿ ಬೆಣ್ಣೆ ಕಾಡಿಗೆ ಕಣ್ಣು ಕಟಿ ಸೂತ್ರ |
ಪಟವಾಳಿ ಕೌಪೀನ ಕೊರಳಲ್ಲಿ ಪದಕ ||
ಸಟಿಯಿಲ್ಲ ಬ್ರಹ್ಮಾಂಡ ಉದರದಲಿಂಬಿಟ್ಟು |
ಮಿಟಮಿಟನೆ ನೋಡುವನು ಈ ಮುದ್ದುಬಾಲ || ೨ ||

ಹರಿವ ಹಾವನು ಕಂಡು ಹೆಡೆ ಹಿಡಿದು ಆಡುವ |
ಕರುವಾಗಿ ಆಕಳ ಮೊಲೆಯುಂಬುವ ||
ಹಿರಿದಾಗಿ ನೋಡಲು ಅಂತರಂಗದ ಸ್ವಾಮಿ |
ಧರೆಯೊಳಂಬುಧಿ ತೀರ ಉಡುಪಿನ ಕೃಷ್ಣ || ೩ ||


ninna maganEne gOpi || pa ||
cennAri celuva uDupina kRuShNarAya || a pa ||

muMguruLu muMdalege BaMgAradaraLele |
raMgu mANikada uMguravaniTTu ||
poMgejje toDaru aMdige Galu Galurene |
aMgaLadoLADuvanu I muddubAla || 1 ||

kaTivAyi beNNe kADige kaNNu kaTi sUtra |
paTavALi kaupIna koraLalli padaka ||
saTiyilla brahmAMDa udaradaliMbiTTu |
miTamiTane nODuvanu I muddubAla || 2 ||

hariva hAvanu kaMDu heDe hiDidu ADuva |
karuvAgi AkaLa moleyuMbuva ||
hiridAgi nODalu aMtaraMgada svAmi |
dhareyoLaMbudhi tIra uDupina kRuShNa || 3 ||

Leave a Reply

Your email address will not be published. Required fields are marked *

You might also like

error: Content is protected !!