Nanda Nandana indira

Composer : Shri Jayesha vittala

By Smt.Shubhalakshmi Rao

ನಂದನಂದನ ಇಂದಿರಾನಂದ
ಸಿಂಧುವದನ ಸುಹಾಸನೇ || ಪ ||

ಹಿಂದು ಮುಂದು ಹೃತ್ಸರೋಜದಿ
ನಿಂದು ನಲಿವನೇ ಕರುಣಿಸೋ || ಅ ಪ ||

ದೇವದೇವನೆ ಮಾವಸುರಹರ
ಗೋವ ಕಾವ ಪರೇಶನೇ |
ಭಾವರಂಜಿತ ಭಾವಜಾನಂತ
ಭಾವ ಮಧುರನೆ ಭೋಗದಾ || ೧ ||

ಗೆಜ್ಜೆಪಾದದಿ ಹೆಜ್ಜೆ ಹೆಜ್ಜೆಗೆ
ಬೊಜ್ಜೆ ಭಾರದಿ ನಡಿಯುತಾ |
ಹೆಜ್ಜೆ ತಪ್ಪಿ ಬಿದ್ದು ಏಳುತ
ಕಂಜಲಾಕ್ಷನು ನಗುವನು || ೨ ||

ಚಂದ್ರ ಕೋಟಿ ಕಾಂತಿ ಸೋಲಿಪ
ಮಂದ ಹಾಸ ಮುಕುಂದನು |
ಬಂದ ಜಯೇಶವಿಠ್ಠಲ ಬಾಲಕ
ಮಂದಜಾಸನ ಪಾಲಕಾ, ಶುಕಪಾಲಕಾ || ೩ ||


naMdanaMdana iMdirAnaMda
siMdhuvadana suhAsanE || pa ||

hiMdu muMdu hRutsarOjadi
niMdu nalivanE karuNisO || a pa ||

dEvadEvane mAvasurahara
gOva kAva parESanE |
BAvaraMjita BAvajAnaMta
BAva madhurane BOgadA || 1 ||

gejjepAdadi hejje hejjege
bojje BAradi naDiyutA |
hejje tappi biddu ELuta
kaMjalAkShanu naguvanu || 2 ||

caMdra kOTi kAMti sOlipa
maMda hAsa mukuMdanu |
baMda jayESaviThThala bAlaka
maMdajAsana pAlakA, SukapAlakA || 3 ||

Leave a Reply

Your email address will not be published. Required fields are marked *

You might also like

error: Content is protected !!