Nanda Nandana baro

Composer : Shri Purandara dasaru

By Smt.Nandini Sripad

Raga: Behag, Eka taala

ನಂದನಂದನ ಬಾರೋ ||ಪ||

ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ||

ಕೊಳಲನೂದುವ ಚಂದದಿ, ಹಣೆಯಲ್ಲಿ
ಸುಳಿಗೂದಲಾಡು-ವಂದದಿ
ತುಳಸೀ ಪುಷ್ಪದ ಬೃಂದದಿ
ಪುರದಾಚೆಯಲಿ ನಲಿದಾಡುವಂದದಿ
ಘಲ ಘಲ ಘಲ ಘಲ ನಲಿವ ಕುಂಡಲ ನಿಜ
ತೋಳುಗಳೊಪ್ಪುವ ಬಾಪುರಿಗಳಿಂದ
ಥಳ ಥಳ ಥಳ ಥಳ ಕಾಂತಿಗಳಿಂದ |೧|

ಮಣಿಯಿಲ್ಲದ ಕೌಸ್ತುಭದಿ, ಎಸೆವ ಮುಕುಟ
ಮಣಿಹಾರ ಶ್ರೀವತ್ಸಾದಿ
ಮಣಿಮಯ ಕಿರೀಟದಿ ಅಂದದಿ ಒಪ್ಪುವ
ಅಗಣಿತ ಮಹತೇಜದಿ
ಝಣ ಝಣ ಝಣ ಝಣ ಝಂ ಪರಿಮಳದಿ
ಕಿಣಿ ಕಿಣಿ ಕಿಣಿ ಕಿಣಿ ಕಿಂಕಿಣಿ ರವದಿಂದ
ಠಣ ಠಣ ಠಣ ಠಣ ಉಡುಝಂಗೆಗಳಿಂದ |೨|

ಅಮಿತ ಜಯ ಪಾಂಡುರಂಗ ವಿಜಯಭಾವಾ
ಅಮರೇಶ ನಿಕರತುಂಗ
ವಿಮಲಪುರಿ ಅಂತರಂಗ ಪುರಂದರ
ವಿಠಲೇಶ ನಿಕರತುಂಗ
ಘಮ ಘಮ ಘಮ ಘಮ ಘಂ ಪರಿಮಳದಿ
ಅಮರರು ಮೃದಂಗ ತಾಳಗಳಿಂದ
ಧಿಮಿ ಧಿಮಿ ಧಿಮಿ ಧಿಮಿ ಧಿಂ ಧಿಂ ಎನುತ |೩|


naMdanaMdana bArO ||pa||

enage ninna sauMdarya lIleya tOrO ||a||

koLalanUduva caMdadi, haNeyalli
suLigUdalADu-vaMdadi
tuLasI puShpada bRuMdadi
puradAceyali nalidADuvaMdadi
Gala Gala Gala Gala naliva kuMDala nija
tOLugaLoppuva bApurigaLiMda
thaLa thaLa thaLa thaLa kAMtigaLiMda |1|

maNiyillada kaustuBadi, eseva mukuTa
maNihAra SrIvatsAdi
maNimaya kirITadi aMdadi oppuva
agaNita mahatEjadi
JaNa JaNa JaNa JaNa JaM parimaLadi
kiNi kiNi kiNi kiNi kiMkiNi ravadiMda
ThaNa ThaNa ThaNa ThaNa uDuJaMgegaLiMda |2|

amita jaya pAMDuraMga vijayaBAvA
amarESa nikaratuMga
vimalapuri aMtaraMga puraMdara
viThalESa nikaratuMga
Gama Gama Gama Gama GaM parimaLadi
amararu mRudaMga tALagaLiMda
dhimi dhimi dhimi dhimi dhiM dhiM enuta |3|

Leave a Reply

Your email address will not be published. Required fields are marked *

You might also like

error: Content is protected !!