Kunidado Krishna

Composer : Shri Purandara dasaru

ಕುಣಿದಾಡೊ ಕೃಷ್ಣ ಕುಣಿದಾಡೊ
ಫಣಿಯ ಮೆಟ್ಟಿ ಬಾಲವ ಪಿಡಿದು
ಕುಣಿಕುಣಿದಾಡುವ ಪಾದದೊಳೊಮ್ಮೆ ||ಪ||

ಮುಂಗುರುಳುಂಗುರ ಜಡೆಗಳರಳೆಲೆ
ಪೊಂಗೊಳಲಲಿ ರಾಗಂಗಳ ಪಿಡಿಯುತ ತ್ರಿ-
ಭಂಗಿಯಲಿ ನಿಂದು ಧಿಗಿಧಿಗಿತಾಂಗಿಣ-
ತಾಂಗಿಣಾ ಥಕ್ಕಥಕ್ಕಧಿಮಿಯೆಂದು |೧|

ಪಂಚಸ್ಥಳದಲಿ ಲಘುವಿಡಿದೊಮ್ಮೆ
ಗಣಪತಿ ನರಸಿಂಹ ಕೋನೇರಿ ತಿಮ್ಮ
ಪಂಚನಾಟಕಭೇದವ ವಾದಿಸುತ್ತ
ಉಡುಪಿಲಿ ನಿಂದನು ಪುರಂದರವಿಠಲ |೨|


kuNidADo kRuShNa kuNidADo
PaNiya meTTi bAlava piDidu
kuNikuNidADuva pAdadoLomme ||pa||

muMguruLuMgura jaDegaLaraLele
poMgoLalali rAgaMgaLa piDiyuta tri-
BaMgiyali niMdu dhigidhigitAMgiNa-
tAMgiNA thakkathakkadhimiyeMdu |1|

paMcasthaLadali laGuviDidomme
gaNapati narasiMha kOnEri timma
paMcanATakaBEdava vAdisutta
uDupili niMdanu puraMdaraviThala |2|

Leave a Reply

Your email address will not be published. Required fields are marked *

You might also like

error: Content is protected !!