Karthika masadalli

Composer : Shri Vadirajaru

By Smt.Shubhalakshmi Rao

ಕಾರ್ತೀಕ ಮಾಸದಲಿ ಕಾಮನ ಪಿತನ ಪೂಜಿಸೇ ||
ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ ||

ದೇವಕಿ ಸುತನ ಪೂಜಿಸಿ ಮಾಸಾಭಿಮಾನಿ
ದಾಮೋದರನ ಭಜಿಸಿ
ಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿ
ಮಹಾ ಪುಣ್ಯ ಪುರುಷೋತ್ತಮನ ಕೊಂಡಾಡುತ
ಎಣ್ಣೆ ಶಾಸ್ತ್ರವನು ರಚಿಸಿರಿ ಬೇಗನೇ ||೧||

ಪುಣ್ಯ ಸಾಧನದ ಜನರೆಲ್ಲ ಭ್ರಾಹ್ಮೀ
ಸುಮುಹೂರ್ತದಲ್ಲಿ ತಾವೆದ್ದು
ಕುಂಭಿಣಿ ಕಸ್ತೂರಿ ಕರ್ಪೂರದ ವೀಳ್ಯ ಪಿಡಿದು
ಮಹಾ ಪುಣ್ಯ ಪುರುಷೋತ್ತಮನ ಎಣ್ಣೆ
ಶಾಸ್ತ್ರವನೆ ರಚಿಸಿರಿ ಬೇಗನೇ ||೨||

ಶೃಷ್ಟಿ ಕರ್ತ ಶ್ರೀ ಹರಿಯು ಶೃಷ್ಟಿಸಿದನು
ದೀಪಾವಳಿಯ ಉತ್ತಮ ಚತುರ್ದಶಿ ದಿನದಂದು
ಮತ್ತೆ ನರಕಾಸುರನ ವಧೆಯನು ಮಾಡಿ
ಭಕ್ತರಿಗ್ ಒಲಿದ ಉತ್ತಮ ಶ್ರೀ ಹಯವದನಗೆ
ಎಣ್ಣೆ ಶಾಸ್ತ್ರವನು ರಚಿಸಿರಿ ಬೇಗನೇ ||೩||


kArtIka mAsadali kAmana pitana pUjisE ||
kArtIka mAsadalli kAmana pitana kuLLirisi ||

dEvaki sutana pUjisi mAsAbhimAni
dAmOdarana bhajisi
lEsu saMpige gaMdheNNe samarpisi
mahA puNya puruShOttamana koMDADuta
eNNe shAstravanu rachisiri bEganE ||1||

puNya sAdhanada janarella bhrAhmI
sumuhUrtadalli tAveddu
kuMbhiNi kastUri karpUrada vILya piDidu
mahA puNya puruShOttamana eNNe
shAstravane rachisiri bEganE ||2||

shRuShTi karta shrI hariyu shRuShTisidanu
deepAvaLiya uttama chaturdashi dinadaMdu
matte narakAsurana vadheyanu mADi
bhaktarig olida uttama shrI hayavadanage
eNNe shAstravanu rachisiri bEganE ||3||

Leave a Reply

Your email address will not be published. Required fields are marked *

You might also like

error: Content is protected !!