Kanda haala kudiyo

Composer : Shri Purandara dasaru

By Smt.Shubhalakshmi Rao

ಕಂದ ಹಾಲ ಕುಡಿಯೋ , ಗೋ-
ವಿಂದ ಹಾಲ ಕುಡಿಯೋ ||ಪ||
ಮಂದರಧರ ಗೋವಿಂದ ಮುಕುಂದ
ಕಂದ ಹಾಲ ಕುಡಿಯೋ ||ಅ||

ಶೃಂಗಾರವಾದ ಗೋವಿಂದ ಚೆನ್ನ
ಪೊಂಗೊಳಲನೂದುತ ಬಂದ
ಅಂಗನೇರು ನಿನ್ನಯ ಚಂದ ನೋಡಿ
ಭಂಗಪಟ್ಟರು ಕಂಡ ದೇವಯ್ಯ |೧|

ಆಕಳ ಬಳಿಗೆ ಓಡಾಡಿ , ಹರಿ
ಶ್ರೀಕಾಂತೇರ ಒಡಗೂಡಿ
ಲೌಕಿಕ ಆಟಗಳಾಡಿ , ನಮಗೆ
ಬೇಕೆಂಬ ಸುಖವೀವ ಕಂಡೆ ದೇವಯ್ಯ |೨|

ಸದಮಲ ಯೋಗಿಗಳೆಲ್ಲ , ಪಾದ-
ಪದುಮವ ನಂಬಿದರೆಲ್ಲ
ಯದುಕುಲತಿಲಕ ಗೋಪಾಲ , ಹಯ-
ವದನ ಪುರಂದರವಿಠಲ |೩|


kaMda hAla kuDiyO , gO-
viMda hAla kuDiyO ||pa||
maMdaradhara gOviMda mukuMda
kaMda hAla kuDiyO ||a||

SRuMgAravAda gOviMda cenna
poMgoLalanUduta baMda
aMganEru ninnaya caMda nODi
BaMgapaTTaru kaMDa dEvayya |1|

AkaLa baLige ODADi , hari
SrIkAMtEra oDagUDi
laukika ATagaLADi , namage
bEkeMba suKavIva kaMDe dEvayya |2|

sadamala yOgigaLella , pAda-
padumava naMbidarella
yadukulatilaka gOpAla , haya-
vadana puraMdaraviThala |3|

Leave a Reply

Your email address will not be published. Required fields are marked *

You might also like

error: Content is protected !!