Composer : Shri Vyasarajaru
ರಾಗ: ಹಂಸಾನಂದಿ ಆದಿತಾಳ
ಕಾಳಿಂಗನ ಮೆಟ್ಟಿ ನಾಟ್ಯವ ಆಡಿದ
ಕಂಜನಾಭ ಕೃಷ್ಣನು || ಪ ||
ಕಾಳಿಂಗನ ಮೆಟ್ಟಿ ಆಡಿದ ಭರದಲ್ಲಿ |
ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ |
ತರಳತನದಲ್ಲಿ ಯಮುನೆಯ ಮಡುವಲ್ಲಿ
ಆಡುತ್ತ ಪಾಡುತ್ತ || ಅ ಪ ||
ಕಾಲಲಿ ಗೆಜ್ಜೆ ಘಲುಘಲು ಘಲುಕೆಂದು |
ಫಾಲದಿ ತಿಲಕವು ಹೊಳೆ ಹೊಳೆ ಹೊಳೆಯುತ್ತ |
ಕರ್ಣಕುಂಡಲವು ಥಳು ಥಳು ಥಳುಕೆಂದು ||
ಲಲಿತ ಮಣಿಮಯೋಜ್ವಲಿತ ಪದಕಹಾರ |
ಜ್ವಲಿತಕಾಂತಿ ಬೆಳಗುತ ದಿಕ್ಕುಗಳಲ್ಲಿ || ೧ ||
ಸುರರು ದುಂದುಭಿಯ ಢಣಢಣ ಢಣರೆಂದು |
ಮೊರೆಯೆ ತಾಳಗಳು ಝಣಝಣ ಝಣರೆಂದು |
ಹರಬ್ರಹ್ಮ ಸುರರು ತತ್ತೈ ತತ್ತೈ ಯೆನಲು ||
ನಾರದ ತುಂಬುರು ಸಿದ್ಧರು ವಿದ್ಯಾ – |
ಧರರು ಅಂಬರದಲ್ಲಿ ಆಡುತ ಪಾಡಲು || ೨ ||
ಯೋಗಿಗಳೆಲ್ಲ ಜಯ ಜಯ ಜಯವೆನ್ನೆ |
ಭೋಗಿಗಳೆಲ್ಲ ಭಯ ಭಯ ಭಯವೆನ್ನೆ |
ನಾಗಕನ್ಯೆಯರು ಅಭಯ ಅಭಯವೆನ್ನೆ ||
ಜಗದೀಶ ಶ್ರೀಕೃಷ್ಣ ಜನನಿಯ ಕಂಡೋಡಿ |
ಧಿಗಿಧಿಗಿನೇ ಬಂದು ಬಿಗಿದಪ್ಪುತ || ೩ ||
rAga: haMsAnaMdi AditALa
kALiMgana meTTi nATyava ADida
kaMjanABa kRuShNanu || pa ||
kALiMgana meTTi ADida Baradalli |
SrIvatsa uradalli koraLalli vanamAle |
taraLatanadalli yamuneya maDuvalli
ADutta pADutta || a pa ||
kAlali gejje GaluGalu GalukeMdu |
PAladi tilakavu hoLe hoLe hoLeyutta |
karNakuMDalavu thaLu thaLu thaLukeMdu ||
lalita maNimayOjvalita padakahAra |
jvalitakAMti beLaguta dikkugaLalli || 1 ||
suraru duMduBiya DhaNaDhaNa DhaNareMdu |
moreye tALagaLu JaNaJaNa JaNareMdu |
harabrahma suraru tattai tattai yenalu ||
nArada tuMburu siddharu vidyA – |
dhararu aMbaradalli ADuta pADalu || 2 ||
yOgigaLella jaya jaya jayavenne |
BOgigaLella Baya Baya Bayavenne |
nAgakanyeyaru aBaya aBayavenne ||
jagadISa SrIkRuShNa jananiya kaMDODi |
dhigidhiginE baMdu bigidapputa || 3 ||
Leave a Reply