Jaganmohanane Krishna

Composer : Shri Purandara dasaru

Smt.Viraja

ಜಗನ್ಮೋಹನನೇ ಕೃಷ್ಣ ಜಗವನೆ ಪಾಲಿಪನೆ ||ಪ||

ಲೋಕದೊಳಗೆ ನೀ ಶಿಶುವಾಗಿ ಮೂ
ರ್ಲೋಕವನೆಲ್ಲ ಬಾಯಲಿ ತೋರಿದೆ
ಆಕಳ ಕಾಯುವ ಚಿಣ್ಣನೆಂದೆನಿಸಿದೆ
ಈ ಕುಟಿಲವನೆಲ್ಲ ಎಲ್ಲಿ ಕಲಿತೆಯೊ ರಂಗ ||೧||

ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ
ಮೃಡಸುರಪಾದ್ಯರು ಪೊಗಳುತಿರೆ
ಹೆಡೆಯ ಮೇಲೆ ಕುಣಿದಾಡುತ ಆಡುತ
ಕಡೆ ಸಾರೆಂಬುದನೆಲ್ಲೆಲ್ಲಿ ಕಲಿತೆಯೊ ರಂಗ ||೨||

ಎಂದೆಂದಿಗು ನಿನ್ನ ಗುಣಗಳ ಪೊಗಳಲು
ಇಂದ್ರಾದಿಗಳಿಗೆ ಅಳವಲ್ಲ
ಮಂದರಧರ ಶ್ರೀ ಪುರಂದರವಿಠಲನೆ
ಒಂದೊಂದಾಟವನೆಲ್ಲಿ ಕಲಿತೆಯೋ ರಂಗ ||೩||


jaganmOhananE kRuShNa jagavane pAlipane ||pa||

lOkadoLage nI SiSuvAgi mU
rlOkavanella bAyali tOride
AkaLa kAyuva ciNNaneMdeniside
I kuTilavanella elli kaliteyo raMga ||1||

mADuva dhumuki kALiMgana Siradalli
mRuDasurapAdyaru pogaLutire
heDeya mEle kuNidADuta ADuta
kaDe sAreMbudanellelli kaliteyo raMga ||2||

eMdeMdigu ninna guNagaLa pogaLalu
iMdrAdigaLige aLavalla
maMdaradhara SrI puraMdaraviThalane
oMdoMdATavanelli kaliteyO raMga ||3||

Leave a Reply

Your email address will not be published. Required fields are marked *

You might also like

error: Content is protected !!