Composer : Shri Purandara dasaru
ಜಯಮಂಗಳಂ ನಿತ್ಯ ಶುಭಮಂಗಳಂ ||ಪ||
ಇಂದೀವರಾಕ್ಷಗೆ ಇಭರಾಜವರದಗೆ
ಇಂದಿರಾರಮಣ ಗೋವಿಂದ ಹರಿಗೆ
ನಂದನ ಕಂದಗೆ ನವನೀತ ಚೋರಗೆ
ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ ||೧||
ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆ
ಮಾರನ್ನ ಪಡೆದ ಮಂಗಳಮೂರ್ತಿಗೆ
ಚಾರುಚರಣಗಳಿಂದ ಚೆಲುವ ಗಂಗೆಯ ಪಡೆದ
ಕಾರುಣ್ಯಮೂರ್ತಿ ಕೌಸ್ತುಭಧಾರಗೆ ||೨||
ವ್ಯಾಸಾವತಾರಗೆ ವೇದ ಉದ್ಧಾರಗೆ
ವಾಸಿತಾನಂತಪದ ಸಕಲೇಶಗೆ
ವಾಸುದೇವ ಮೂರ್ತಿ ಪುರಂದರವಿಠ್ಠಲಗೆ
ದಾಸರನು ಕಾಯ್ವ ರುಕ್ಮಿಣಿರಮಣಗೆ ||೩||
jayamaMgaLaM nitya SuBamaMgaLaM ||pa||
iMdIvarAkShage iBarAjavaradage
iMdirAramaNa gOviMda harige
naMdana kaMdage navanIta cOrage
vRuMdArakEMdra uDupiya kRuShNage ||1||
kShIrAbdhivAsage kShitijana pAlage
mAranna paDeda maMgaLamUrtige
cArucaraNagaLiMda celuva gaMgeya paDeda
kAruNyamUrti kaustuBadhArage ||2||
vyAsAvatArage vEda uddhArage
vAsitAnaMtapada sakalESage
vAsudEva mUrti puraMdaraviThThalage
dAsaranu kAyva rukmiNiramaNage ||3||
Leave a Reply