Govinda namo

Composer : Shri Purandara dasaru

By Smt.Shubhalakshmi Rao

ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ
ಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ ||ಅ.ಪ.||

ಮಂಚ ಬಾರದು ಮಡದಿ ಬಾರಳು, ಕಂಚುಕನ್ನಡಿ ಬಾರವು
ಸಂಚಿತಾರ್ಥದ ದ್ರವ್ಯ ಬಾರದು, ಮುಂಚೆ ಮಾಡಿರೊ ಧರ್ಮವ (೧)

ಅರ್ಥವ್ಯಾರಿಗೆ ಪುತ್ರರ್ಯಾರಿಗೆ, ಮಿತ್ರ ಬಾಂಧವರ್ಯಾರಿಗೆ
ಕರ್ತೃ ಯಮನವರೆಳೆದು ಒಯ್ದಾಗ, ಅರ್ಥಪುತ್ರರು ಕಾಯ್ವರೆ (೨)

ತಂದು ಬಂದರೆ ತನ್ನ ಪುರುಷನ, ಬಂದಿರಾ ಬಳಲಿದಿರಾ ಎಂಬಳು
ಒಂದು ದಿವಸ ತಾರದಿದ್ದರೆ, ಹಂದಿನಾಯಂತೆ ಬೊಗಳ್ವಳು (೩)

ಪ್ರಾಣವಲ್ಲಭೆ ತನ್ನ ಪುರುಷನ, ಕಾಣದೆ ನಿಲ್ಲಲಾರಳು
ಪ್ರಾಣಹೋಗುವ ಸಮಯದಲ್ಲಿ, ಜಾಣೆ ಕರೆದರೆ ಬಾರಳು (೩)

ಉಂಟು ಕಾಲಕೆ ನಂಟರಿಷ್ಟರು, ಬಂಟರಾಗಿ ಕಾಯ್ದರು
ಕಂಟಕ ಯಮನವರು ಎಳೆವಾಗ, ನಂಟರಿಷ್ಟರು ಬಾರರು (೪)

ಒಡವೆ ಅರಸಿಗೆ ಒಡಲು ಅಗ್ನಿಗೆ, ಮಡದಿ ಮತ್ತೊಬ್ಬ ಚೆಲುವಗೆ
ಬಡಿದು ಹೊಡೆದು ಯಮನವರೆಳೆವಾಗ, ಎಡವಿ ಬಿದ್ದಿತು ನಾಲಗೆ (೫)

ದಿಟ್ಟತನದಲಿ ಪಟ್ಟವಾಳುವ, ಕೃಷ್ಣರಾಯನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ ವಿಟ್ಠಲೇಶನ ಚರಣವ (೬)


gOviMda namO gOviMda namO gOviMda nArAyaNa
gOvardhana giriyanettida goviMda namma rakShisai ||a.pa.||

maMca bAradu maDadi bAraLu, kaMcukannaDi bAravu
saMcitArthada dravya bAradu, muMce mADiro dharmava (1)

arthavyArige putraryArige, mitra bAMdhavaryArige
kartRu yamanavareLedu oydAga, arthaputraru kAyvare (2)

taMdu baMdare tanna puruShana, baMdirA baLalidirA eMbaLu
oMdu divasa tAradiddare, haMdinAyaMte bogaLvaLu (3)

prANavallaBe tanna puruShana, kANade nillalAraLu
prANahOguva samayadalli, jANe karedare bAraLu (3)

uMTu kAlake naMTariShTaru, baMTarAgi kAydaru
kaMTaka yamanavaru eLevAga, naMTariShTaru bAraru (4)

oDave arasige oDalu agnige, maDadi mattobba celuvage
baDidu hoDedu yamanavareLevAga, eDavi bidditu nAlage (5)

diTTatanadali paTTavALuva, kRuShNarAyana caraNava
muTTi Bajisiro siri puraMdara viTThalESana caraNava (6)

Leave a Reply

Your email address will not be published. Required fields are marked *

You might also like

error: Content is protected !!