Composer : Shri Vyasarajaru
ಎಲ್ಲಿ ಮಾಯವಾದನೆ ರಂಗಯ್ಯನು ||ಪ||
ಎಲ್ಲಿ ಮಾಯವಾದ ಪುಲ್ಲನಾಭ ಕೃಷ್ಣ
ಚೆಲ್ಲೆಗಂಗಳೆಯರು ಹುಡುಕ ಹೋಗುವ ಬನ್ನಿ ||ಅ.ಪ||
ಮಂದಗಮನೆಯರೆಲ್ಲ ಕೃಷ್ಣನ ಕೂಡೆ
ಚಂದದಿ ಇದ್ದೆವಲ್ಲ
ಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲ
ಮಂದಮತಿಯು ನಮಗೆ ಬಂದು ಒದಗಿತಲ್ಲ ||೧||
ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆ
ಸರಸವಾಡುತಲಿದ್ದೆವೆ
ಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿ
ಚರಣ ಸೇವಕರಾದ ತರಳೆಯರನು ಬಿಟ್ಟು ||೨||
ಭಕ್ತವತ್ಸಲ ದೇವನು ತನ್ನವರನ್ನು
ಅಕ್ಕರದಲಿ ಪೋರೆವೇನು
ಸಿಕ್ಕದೆ ಹೋಗನು ಹುಡುಕುತ್ತ ಹೋಗುವ
ಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು ||೩||
elli mAyavAdane raMgayyanu ||pa||
elli mAyavAda pullanABa kRuShNa
chellegaMgaLeyaru huDuka hOguva banni ||a.pa||
maMdagamaneyarella kRuShNana kUDe
caMdadi iddevalla
kaMdarpana bAdhege guriya mADidanalla
maMdamatiyu namage baMdu odagitalla ||1||
sarasijAkShiyaru kUDi kRuShNana kUDe
sarasavADutaliddeve
karekaregoLisi manmatha bAdhegoppisi
caraNa sEvakarAda taraLeyaranu biTTu ||2||
Baktavatsala dEvanu tannavarannu
akkaradali pOrevEnu
sikkade hOganu huDukutta hOguva
akkayya bannire uDupi SrIkRuShNanu ||3||
Leave a Reply