Gopa gopanembo

Composer : Shri Purandara dasaru

Smt.Viraja

ಗೋಪಗೋಪನೆಂಬ ಕೋಗಿಲೆ ನಮ್ಮ
ಶ್ರೀಪತಿಯ ಕಂಡರೆ ಬರಹೇಳು ಕೋಗಿಲೆ ||ಪ||

ಮಧುಮಾಸದಿ ಮಾಧವ ಬರಲು
ಸುದತಿಯರು ಸಮ್ಮೇಳದಿಂದಲಿ
ಒದಗಿ ವಸಂತದಲ್ಲಾಡುವ ಸಮಯದಿ
ಪದುಮನಾಭನ ಕಂಡರೆ ಬರಹೇಳೆ ಕೋಗಿಲೆ ||೧||

ಅಂಗಜನಯ್ಯನ ಅಗಣಿತನ
ಮಂಗಳ ಮಹಿಮನ ಮೂರುತಿಯಾ
ಸಂಗೀತ ಸೊಬಗಿನ ಸೊಲ್ಲು ನುಡಿಯಲಿ ನಮ್ಮ
ರಂಗನ ಕಂಡರೆ ಬರಹೇಳೆ ಕೋಗಿಲೆ ||೨||

ಇಟ್ಟಾಡುವ ಶೃತಿಸ್ಮೃತಿಗಳಲಿ or [ಇಟ್ಟಾಡುವ ಶೃತಿಕೃತಿಗಳಾ]
ಬಟ್ಟೆಯ ಕಾಣೆವು ಪರಬೊಮ್ಮನ
ಸೃಷ್ಟಿಯೊಳಗೆ ನಮ್ಮ ಪುರಂದರ ವಿಠಲನ
ಥಟ್ಟನೆ ಕಂಡರೆ ಬರಹೇಳೆ ಕೋಗಿಲೆ ||೩||


gOpagOpaneMba kOgile namma
SrIpatiya kaMDare barahELu kOgile ||pa||

madhumAsadi mAdhava baralu
sudatiyaru sammELadiMdali
odagi vasaMtadallADuva samayadi
padumanABana kaMDare barahELe kOgile ||1||

aMgajanayyana agaNitana
maMgaLa mahimana mUrutiyA
saMgIta sobagina sollu nuDiyali namma
raMgana kaMDare barahELe kOgile ||2||

iTTADuva SRutismRutigaLali or [iTTADuva SRutikRutigaLA]
baTTeya kANevu parabommana
sRuShTiyoLage namma puraMdara viThalana
thaTTane kaMDare barahELe kOgile ||3||

Leave a Reply

Your email address will not be published. Required fields are marked *

You might also like

error: Content is protected !!