Composer : Shri Purandara dasaru
ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ || ಪ ||
ಮಾನ ತಪ್ಪಿ ಬಂದ ಮನೆಯೊಳಗೆ ಗೋಪಿ || ಅ.ಪ ||
ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ |
ಅಡಗಿದ್ದನೆ ದೊಡ್ಡ ಕೊಡದೊಳಗೆ ||
ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ |
ಬಡವರ ಮಗನೇನೆ ಹೊಡೆಯಲಿಕ್ಕೆ ಗೋಪಿ || ೧ ||
ಅಳಿಯನ ವೇಷದಿ ಮಗಳ ಕರೆಯ ಬಂದ |
ಕಲಹ ಮಾಡಿ ತಾ ಕಳಿಸೆಂದ ||
ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ |
ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ || ೨ ||
ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ |
ಪುಟ್ಟಿಸಬೇಡಿರಿ ಅನ್ಯಾಯವ ||
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ |
ದೃಷ್ಟಿಸಿ ನೋಡಿರಿ ತೊಟ್ಟಿಲಿನೊಳಗೆ || ೩ ||
Ena pELale gOpi ninna magana jAla || pa ||
mAna tappi baMda maneyoLage gOpi || a.pa ||
koDa hAlu kuDidane gaDigeya oDedane |
aDagiddane doDDa koDadoLage ||
huDuga sikkidaneMdu hoDeyalu hOdare |
baDavara maganEne hoDeyalikke gOpi || 1 ||
aLiyana vEShadi magaLa kareya baMda |
kalaha mADi tA kaLiseMda ||
olumeyiMdali tiMgaLeraDiTTukoMDare |
giLiyaMtha heNNina keDisidane gOpi || 2 ||
iShToMdu siTTEke ciNNa kRuShNana mEle |
puTTisabEDiri anyAyava ||
sRuShTigoDeya namma puraMdaraviThalana |
dRuShTisi nODiri toTTilinoLage || 3 ||
Leave a Reply