Composer : Shri Kanakadasaru
ಏಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ ||
ಎಲ್ಲಿ ಭಕುತರು ಕರೆವರಲ್ಲೆ ಒದಗುವನು || ಅ ||
ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು
ಬರೆದೋದಲವನಪಿತ ಕೋಪದಿಂದ
ಸ್ಥಿರವಾದ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ? || ೧ ||
ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಹಿ ಹಾ ಕೃಷ್ಣ ಎಂದರೆ ಕೇಳ್ದು
ಭರದಿಂದ ಅಕ್ಷಯಾಂಬರವಿತ್ತ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ ? || ೨ ||
ಅಣುಹೊಟ್ಟಿನೋಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆವರ ಮನದೊಳು ಇಹನೆಂಬ ಬಿರುದುಂಟೆ || ೩ ||
ElliruvanO raMga eMba saMSaya bEDa || pa ||
elli Bakutaru karevaralle odaguvanu || a ||
taraLa prahlAda SrIhari viSvamayaneMdu
baredOdalavanapita kOpadiMda
sthiravAda kaMBadali tOru tOrenalu
BaradiMda baraladake vaikuMTha neremaneyE ? || 1 ||
kurupatiyu draupadiya sIreyanu seLeyutire
taruhi hA kRuShNa eMdare kELdu
BaradiMda akShayAMbaravitta hastinA
purige dvArAvatiyu kUgaLateyE ? || 2 ||
aNuhoTTinOLella paripUrNa viSvamaya
gaNaneyillada mahAmahimanenipa
Gana kRupAnidhi kAgineleyAdikESavanu
nenevara manadoLu ihaneMba biruduMTe || 3 ||
Leave a Reply