Composer : Shri Vadirajaru
ಈ ಮುದ್ದು ಕೃಷ್ಣನ ಈ ಕ್ಷಣದ ಸುಖವೆ ಸಾಕು ||ಪ||
ಶ್ರೀಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ ||ಅ||
ಚೆಲುವ ಚರಣದ್ವಂದ್ವ ಜಂಘೆ ಜಾನೂರು ಕಟಿ |
ವಳಿಪಂಕ್ತಿ ಜಠರ ವಕ್ಷ ಕಂಬು ಕಂಧರದ |
ನಳಿತೋಳು ಮುದ್ದು ಮುಖ ನಯನ ನಾಸಿಕ ಕರ್ಣ |
ಸುಳಿಗುರುಳ ಮಸ್ತಕದ ನಳಿನನಾಭನ ಸೊಬಗ ||೧||
ಕಿರುಗೆಜ್ಜೆ ಕಡೆ ಪೆಂಡೆ ಗಂಟೆ ಕಟಿಸೂತ್ರ |
ವರ ಹಾರ ಪದಕ ಶ್ರೀವತ್ಸ ಕೌಸ್ತುಭ ರತ್ನ |
ಉರು ಮುದ್ರೆ ಕಂಕಣಾಂಗದ ಕುಂಡಲ ಪ್ರಭೆಯ |
ಸಿರಿನಾಮ ಮಕುಟ ನಾಸಿಕದ ಮಣಿಯ ||೨||
ಸಕಲ ದೇವೋತ್ತಮನ ಸರ್ವಗುಣ ಪೂರ್ಣನ |
ಅಕಳಂಕ ಅಖಿಳಾಗಮಸ್ತುತನ ಅಪ್ರಾಕೃತನ |
ಅಖಿಳ ಜೀವೋತ್ತಮನ ಚೆನ್ನ ಹಯವದನನ |
ಸುಕರ ಕಡೆಗೋಲು ನೇಣುಗಳ ಪಿಡಿದಿಪ್ಪನ ||೩||
I muddu kRuShNana I kShaNada suKave sAku ||pa||
SrImadhvamuniya manedaiva uDupina kRuShNa ||a||
celuva caraNadvaMdva jaMGe jAnUru kaTi |
vaLipaMkti jaThara vakSha kaMbu kaMdharada |
naLitOLu muddu muKa nayana nAsika karNa |
suLiguruLa mastakada naLinanABana sobaga ||1||
kirugejje kaDe peMDe gaMTe kaTisUtra |
vara hAra padaka SrIvatsa kaustuBa ratna |
uru mudre kaMkaNAMgada kuMDala praBeya |
sirinAma makuTa nAsikada maNiya ||2||
sakala dEvOttamana sarvaguNa pUrNana |
akaLaMka aKiLAgamastutana aprAkRutana |
aKiLa jIvOttamana chenna hayavadanana |
sukara kaDegOlu nENugaLa piDidippana ||3||
Leave a Reply