Chiranjeevi Agelo

Composer : Shri Vijayadasaru

Smt.Viraja

ಚಿರಂಜೀವಿಯಾಗೆಲೊ ಚಿನ್ನ ನೀನು ||ಪ||

ಜರಿಯಬೇಡ ಹರಿಯ ಮರೆಯಬೇಡೆಂದೆಂದು
ತಿರಿಯಬೇಡ ಖಳರ ಮನೆಗೆ ಪೋಗಿ
ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು
ಬೆರೆಯಬೇಡನ್ಯ ಸತಿಯರ ಸ್ವಪ್ನದಲೂ ||೧||

ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ
ಶ್ರೀಕಾಂತನ ಚರಿತೆಯನು ಕೇಳದಿರಬೇಡ
ಪಾಕವನು ಮಾಡಿ ಏಕಾಂಗಿಯಾಗಿ ಉಣಬೇಡ
ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||೨||

ಸಾಲ ಮಾಡಲಿ ಬೇಡ ಸಾಲದೆಂದೆನಬೇಡ
ನಾಳೆಗೆ ಹ್ಯಾಗೆಂಬ ಚಿಂತೆ ಬೇಡ
ಖೂಳ ಜನರೊಡನೆ ಮಿತ್ರತ್ವಾಡಲಿ ಬೇಡ
ಬಾಳುವರ ಸಂಗದಲಿ ಬಾಳೆಲವೊ ಬಾಲ ||೩||

ಪಂಡಿತರು ಪಾಮರರು ಆರಿಗಾದರೂ ನಿನ್ನ
ಕಂಡವರಿಗೆಲ್ಲ ಕೌತುಕ ತೋರಲಿ
ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು
ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ ||೪||

ಮಂದಮತಿಗಳ ಕೂಡ ಮಾತಾಡಲಿ ಬೇಡ
ಹರಿ ನಿಂದಕರ ಕಣ್ಣೆತ್ತಿ ನೋಡಬೇಡ
ಇಂದಿರಾರಮಣ ಸಿರಿ ವಿಜಯವಿಠ್ಠಲನ ಚರಣ
ದ್ವಂದ್ವದಲಿ ಮಸ್ತಕವ ನೀಡದಿರಬೇಡ||೫||


ciraMjIviyAgelo cinna nInu ||pa||

jariyabEDa hariya mareyabEDeMdeMdu
tiriyabEDa KaLara manege pOgi
jareyabEDanyarige rahasya tattvagaLannu
bereyabEDanya satiyara svapnadalU ||1||

lOkavArteya ninna kivige kELisabEDa
SrIkAMtana cariteyanu kELadirabEDa
pAkavanu mADi EkAMgiyAgi uNabEDa
BUkAMtaranusarisi besagoLLabEDa ||2||

sAla mADali bEDa sAladeMdenabEDa
nALege hyAgeMba ciMte bEDa
KULa janaroDane mitratvADali bEDa
bALuvara saMgadali bALelavo bAla ||3||

paMDitaru pAmararu ArigAdarU ninna
kaMDavarigella kautuka tOrali
heMDiru makkaLu aLiya sose mommakkaLu
uMDuTTu dvijara saha gaMDugaliyAgO ||4||

maMdamatigaLa kUDa mAtADali bEDa
hari niMdakara kaNNetti nODabEDa
iMdirAramaNa siri vijayaviThThalana caraNa
dvaMdvadali mastakava nIDadirabEDa||5||

Leave a Reply

Your email address will not be published. Required fields are marked *

You might also like

error: Content is protected !!