Composer : Shri Purandara dasaru
ಚೆಂದವ ನೋಡಿರೆ ಗೋಕುಲಾ-|
ನಂದನ ಮೂರುತಿಯ [ಪ]
ಅಂದುಗೆ ಪಾಡಗ ಗೆಜ್ಜೆಯ ಧರಿಸಿ |
ಧಿಂ ಧಿಮಿಕೆಂದು ಕುಣಿಯುವ ಕೃಷ್ಣನ [ಅ.ಪ]
ಕೊರಳ ಪದಕಹಾರ ಬಿಗಿದು |
ತರಳರೆಲ್ಲರ ಕೂಡಿಕೊಂಡು ||
ಕುರುಳುಗೂದಲು ಅರಳೆಲೆಯ |
ಫಳ ಫಳಿಸುತ ಮೆರೆವ ಕೃಷ್ಣನ [೧]
ಉಡೆಯ ಗಂಟೆ ಘ್ಹಳಿಲೆನುತ |
ನುಡಿದು ಮೆಲ್ಲನೆ ಪಿಡಿದುಕೊಂಡು ||
ನಡೆಗೆ ಮಾಲುತ ಸಡಗರದಲಿ |
ಬೆಡಗು ಮಾಡಿ ಆಡುವ ರಂಗನ [೨]
ಬಲು ಅಸ್ಥೈರ್ಯದಿಂದಲಿ |
ನಲಿವ ಪುರಂದರವಿಠ್ಠಲರಾಯ ||
ಹಲವು ಸುಖವ ನಮಗಿತ್ತು |
ಜಲಜಲೋಚನ ಬಾಲಕೃಷ್ಣನ [೩]
ceMdava nODire gOkulA-|
naMdana mUrutiya [pa]
aMduge pADaga gejjeya dharisi |
dhiM dhimikeMdu kuNiyuva kRuShNana [a.pa]
koraLa padakahAra bigidu |
taraLarellara kUDikoMDu ||
kuruLugUdalu araLeleya |
phaLa phaLisuta mereva kRuShNana [1]
uDeya gaMTe GhaLilenuta |
nuDidu mellane piDidukoMDu ||
naDege mAluta saDagaradali |
beDagu mADi ADuva raMgana [2]
balu asthairyadiMdali |
naliva puraMdaraviThThalarAya ||
halavu suKava namagittu |
jalajalOcana bAlakRuShNana [3]
Leave a Reply