Composer : Shri kakhandaki krishnadasaru
ಬಾರಯ್ಯಾ ಗೋವಿಂದಾ | ಬಾರೋ ನಂದನ ಕಂದಾ [ಪ]
ಕನಕಗರ್ಭನ ತಂದೆ |
ಕನಕಮೃಗವ ಕೊಂದೆ |
ಕನಕಾಂಬರಧರ | ಕನಕನಯನ ಹರ |
ಕನಕವತಿ ರಮನ | ಕನಕಾಭರಣ [೧]
ಹರಿಯಾನಂದನ ಕೊಲಿಸಿ |
ಹಿರಯಾನಂದನನುಳಿಸಿ |
ಹರಿಯಾ ಸುತನುತ | ಹರಿಯಾ ರಿಪುಸುತ |
ಹರಿಯೇ ಬಾಯೆನ್ನ ಮರಯಾದೆ [೨]
ಗೋಕುಲವರಾಧಾರಾ |
ಗೋಕುಲ ವಿಹಾರಾ | ಗೋಕರ್ಣ ಶಯನಾ |
ಗೋಕೋಟಿ ತೇಜಾ | ಮಹಿಪತಿ ಸುತ
ಪ್ರಭು ಗೋಪಾಲಾ [೩]
bArayyA gOviMdA | bArO naMdana kaMdA [pa]
kanakagarBana taMde |
kanakamRugava koMde |
kanakAMbaradhara | kanakanayana hara |
kanakavati ramana | kanakABaraNa [1]
hariyAnaMdana kolisi |
hirayAnaMdananuLisi |
hariyA sutanuta | hariyA ripusuta |
hariyE bAyenna marayAde [2]
gOkulavarAdhArA |
gOkula vihArA | gOkarNa SayanA |
gOkOTi tEjA | mahipati suta
praBu gOpAlA [3]
Leave a Reply