Composer : Shrikara vittala
ಆರುತಿಯ ಬೇಳಗೆ ಮುರಾರಿಗೇ || ಪ ||
ಬೀರುತ ಹರಿಗುಣ ಸಾರುತ ಮುದ |
ವಾರಿಜ ವದನೆಯ ನೀರಜ ನಾಭಗೆ || ಅ. ಪ. ||
ಭಾವಜಯ್ಯಗೆ ಗೋವಳರಾಯಗೆ |
ಕಾವಲಿನೊಳು ಪುಟ್ಟಿ ಮಾವನ ತರಿದಗೆ |
ಕೋವಿದರೊಡೆಯಗೆ ಕಾವಾ ಕರುಣಿಗೆ |
ಪಾವಿನ ಮೇಲ್ ತಾ ಪವಡಿಸಿದವಗೆ || ೧ ||
ಇಂದಿವರಾಕ್ಷಗೆ ಸಿಂಧು ಶಯನಗೆ |
ಇಂದುಧರಾಮರ ವಂದಿತ ಹರಿಗೇ |
ಮಂದಾಕಿನಿ ಪಿತ ಸಿಂಧೂಜವರಗೆ |
ಬಂಧೂರ ಮಹಿಮಗೆ ನಂದನ ಕಂದಗೆ || ೨ ||
ವಾಸವಾನುಜಗೆ ಭಾಸುರ ಚರಿತಗೆ |
ಭೂಸುರ ವರ ಪ್ರಿಯ ದೋಶರಹಿತಗೆ |
ಅಸಮಾಂಟಕ ಸಖ ಶ್ರೀಕರ ವಿಠಲಗೆ |
ಬಿಸಜಾಂಬಕಗೆ ಅಸುರ ಮರ್ಧನಗೆ || ೩ ||
Arutiya bELage murArigE || pa ||
bIruta hariguNa sAruta muda |
vArija vadaneya nIraja nAbhage || a. pa. ||
bhAvajayyage gOvaLarAyage |
kAvalinoLu puTTi mAvana taridage |
kOvidaroDeyage kAvA karuNige |
pAvina mEl tA pavaDisidavage || 1 ||
iMdivarAkShage siMdhu shayanage |
iMdudharAmara vaMdita harigE |
maMdAkini pita siMdhUjavarage |
baMdhUra mahimage naMdana kaMdage || 2 ||
vAsavAnujage bhAsura caritage |
bhUsura vara priya dOsharahitage |
asamAMTaka sakha shrIkara viThalage |
bisajAMbakage asura mardhanage || 3 ||
Leave a Reply