Composer : Shri Purandara dasaru
ಅಂಗನೆಯರೆಲ್ಲ ನೆರೆದು ಚಪ್ಪಳೆಯಿಕ್ಕುತ ದಿವ್ಯ |
ಮಂಗಳನಾಮವ ಪಾಡಿ ರಂಗನ ಕುಣಿಸುವರು [ಪ]
ಪಾಡಿ ಮಲಹರಿ ಭೈರವ ಸಾರಂಗ ದೇಶಿ |
ಗುಂಡಕ್ರಿ ಗುಂಜರಿ ಕಲ್ಯಾಣಿ ರಾಗದಿ ||
ತಂಡತಂಡದಲ್ ನೆರೆದು ರಂಗನ ಉಡಿಗಂಟೆ |
ಘಣ್ ಘಣ ಘಣರೆಂದು ಹಿಡಿದು ಕುಣಿಸುವರು [೧]
ತುತ್ತೂರಿ ಮೌರಿ ತಾಳ ದಂಡಿಗೆ ಮದ್ದಲೆ |
ಉತ್ತಮ ಶಂಖದ ನಾದಗಳಿಂದ ||
ಸುತ್ತಮುತ್ತಿ ನಾರಿಯರು ತಾಥೈಯೆಂದು |
ಅರ್ತಿಯಿಂದ ಕುಣಿಸುವರು ಪರವಸ್ತು ಹಿಡಿದು [೨]
ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ |
ಪ್ರೇಮದಿಂದ ಬಿಗಿಬಿಗಿದಪ್ಪಿ ಮುದ್ದಾಡಿ ||
ಕಾಮಿತ ಫಲವೀವ ಭಕುತಜನರೊಡೆಯ |
ಸ್ವಾಮಿ ಶ್ರೀ ಪುರಂದರವಿಠಲರಾಯನ [೩]
aMganeyarella neredu cappaLeyikkuta divya |
maMgaLanAmava pADi raMgana kuNisuvaru [pa]
pADi malahari Bairava sAraMga dESi |
guMDakri guMjari kalyANi rAgadi ||
taMDataMDadal neredu raMgana uDigaMTe |
GaN GaNa GaNareMdu hiDidu kuNisuvaru [1]
tuttUri mauri tALa daMDige maddale |
uttama SaMKada nAdagaLiMda ||
suttamutti nAriyaru tAthaiyeMdu |
artiyiMda kuNisuvaru paravastu hiDidu [2]
kAminiyarella neredu kaMdanoDanATavADi |
prEmadiMda bigibigidappi muddADi ||
kAmita PalavIva BakutajanaroDeya |
svAmi SrI puraMdaraviThalarAyana [3]
Leave a Reply