Composer : Shri Purandara dasaru
ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ ||ಪ||
ಪುಟ್ಟಿದೇಳು ದಿವಸದಲಿ
ದುಷ್ಟ ಪೂತನಿಯ ಕೊಂದೆ
ಮುಟ್ಟಿ ವಿಷದ ಮೊಲೆಯುಂಡ ಕಾರಣ
ದೃಷ್ಟಿ ತಾಕಿತೆ ನಿನಗೆ ರಂಗ ||೧||
ತುರುವ ಕಾಯಲು ಪೋಗಿ
ಭರದಿ ಇಂದ್ರ ಮಳೆಗರೆಯೆ
ಬೆರಳಲಿ ಬೆಟ್ಟವ ನೆಗಹಿದ ಕಾರಣ
ಬೆರಳು ಉಳುಕಿತೆ ನಿನಗೆ ರಂಗ ||೨||
ಬಾಲಕತನದಲ್ಲಿ
ಗೋಪಾಲಕರೊಡನಾಡಿ
ಕಾಳಿಯ ಮಾಡುವ ತುಮುಕಿದ ಕಾರಣ
ಕಾಲು ನೊಂದಿತೆ ನಿನಗೆ ರಂಗ ||೩||
ವಾಸುದೇವ ಸುತನಾಗಿ
ಅಸುರ ಮಲ್ಲರ ಕೊಂದು
ಕಸುವಿನ ಕಂಸನ ಕೊಂದ ಕಾರಣ
ಕಿಸಿರು ತಾಕಿತೆ ನಿನಗೆ ರಂಗ ||೪||
ಶರಣು ವೇಲಾಪುರದ
ದೊರೆಯೆ ಚೆನ್ನಿಗರಾಯ
ಶರಣರ ಸಲಹುವ ಕರುಣಾನಿಧಿಯೆ
ವರದ ಪುರಂದರವಿಠ್ಠಲ ರಾಯನೆ ||೫||
aLuvadyAtako raMga attaraMjipa gumma ||pa||
puTTidELu divasadali
duShTa pUtaniya koMde
muTTi viShada moleyuMDa kAraNa
dRuShTi tAkite ninage raMga ||1||
turuva kAyalu pOgi
Baradi iMdra maLegareye
beraLali beTTava negahida kAraNa
beraLu uLukite ninage raMga ||2||
bAlakatanadalli
gOpAlakaroDanADi
kALiya mADuva tumukida kAraNa
kAlu noMdite ninage raMga ||3||
vAsudEva sutanAgi
asura mallara koMdu
kasuvina kaMsana koMda kAraNa
kisiru tAkite ninage raMga ||4||
SaraNu vElApurada
doreye cennigarAya
SaraNara salahuva karuNAnidhiye
varada puraMdaraviThThala rAyane ||5||
Leave a Reply