Sheshadevane poshisennanu

Composer : Shri Karpara Narasimha dasaru

By Smt.Shubhalakshmi Rao

ಶೇಷದೇವನೇ ಪೋಷಿಸೆನ್ನನು || ಪ ||

ಶೇಷದೇವ ಕರುಣಾ-ಸಮುದ್ರ ಭವ |
ಕ್ಲೇಶವ ಕಳೆಯೋ ಸುರೇಶ ಮುಖ ವಿನುತ || ಅ.ಪ ||

ವಾಸುದೇವನ ಶಯ್ಯಾಸನ |
ರೂಪದಿ ಸೇವಿಸುವಿ ಚರಣ |
ಸಾಸಿರ ವದನದಿಶ್ರೀಶನ ಶುಭಗುಣ |
ಲೇಶ ವರ್ಣಿಪ ಭಾಸುರ ವಪುಷಾ ||೧||

ಹೇ ಮಹಾತ್ಮನೇ ಭೂಮಿ ಪಾತಾಳ |
ವ್ಯೋಮ ವ್ಯಾಪ್ತನೇ |
ರಾಮನ ಸೇವಿಸಿ ಪ್ರೇಮವ ಪಡೆದಿಹ |
ಸೌಮಿತ್ರಿಯ ಶುಭ ನಾಮದಿ ಮೆರೆದ ||೨||

ವಾರುಣೀವರ ಧಾರುಣಿಯೊಳು |
ಕೃಷ್ಣಾತೀರ ಕಾರ್ಪರ |
ನಾರಸಿಂಹನ ಪಾ-ದಾರವಿಂದ ಯುಗ |
ಸೇರಿ ಸುಖಿಸುತಿಹ ಶೌರಿಯಗ್ರಜ ||೩||


SEShadEvanE pOShisennanu || pa ||

SEShadEva karuNA-samudra Bava |
klESava kaLeyO surESa muKa vinuta || a.pa ||

vAsudEvana SayyAsana |
rUpadi sEvisuvi caraNa |
sAsira vadanadiSrISana SuBaguNa |
lESa varNipa BAsura vapuShA ||1||

hE mahAtmanE BUmi pAtALa |
vyOma vyAptanE |
rAmana sEvisi prEmava paDediha |
saumitriya SuBa nAmadi mereda ||2||

vAruNIvara dhAruNiyoLu |
kRuShNAtIra kArpara |
nArasiMhana pA-dAraviMda yuga |
sEri suKisutiha Sauriyagraja ||3||

Leave a Reply

Your email address will not be published. Required fields are marked *

You might also like

error: Content is protected !!