Composer : Shri Jagannatha dasaru
ಶೇಷದೇವ ವಾರುಣೀಪತಿ ಪಾಹಿ ||ಪ||
ಶೇಷದೇವ ತ್ರೈಘೋಷಣ ಮುಖ ಪರಿ
ಪೋಷಿಸು ಎಮ್ಮಭಿಲಾಷೆಯ ಸಲಿಸಿ ||ಅ.ಪ.||
ಭಜಿಸುವೆ ಸರ್ವದಾ ಸುಜನರಭೀಷ್ಟದ
ಸುಜನಾರಾಧಕ ಭುಜಗೋತ್ತಂಸ (೧)
ಪುಣ್ಯ ಚರಿತ ಸುಶರಣ್ಯಗೆ ಸುಬ್ರಹ್ಮಣ್ಯ
ದೇವ ಕಾರುಣ್ಯ ಮೂರುತಿ (೨)
ವಾರುಣಿ ಸುಮುಖ ಸರೋರುಹ ದಿನಕರ
ತೋರು ತವಾಂಘ್ರಿ ಮಹೋರಗ ರಾಜ (೩)
ಅಸಿತವಸನ ಹಲ ಮುಸಲಾಯುಧ ಧರ
ದ್ವಿಸಹಸ್ರೇಕ್ಷಣ ಸುಶರಣ ಪಾಲ (೪)
ಪಾತಾಳಪ ಪುರುಹೂತನುತ ಜಗ
ನ್ನಾಥ ವಿಠ್ಠಲನ ಪ್ರೀತಿ ವಿಷಯನೆ (೫)
SEShadEva vAruNIpati pAhi ||pa||
SEShadEva traiGOShaNa mukha pari
pOShisu emmabhilASheya salisi ||a.pa.||
bhajisuve sarvadA sujanarabhIShTada
sujanArAdhaka bhujagOttaMsa (1)
puNya carita suSaraNyage subrahmaNya
dEva kAruNya mUruti (2)
vAruNi sumukha sarOruha dinakara
tOru tavAMGri mahOraga rAja (3)
asitavasana hala musalAyudha dhara
dvisahasrEkShaNa susharaNa pAla (4)
pAtALapa puruhUtanuta jaga
nnAtha viThThalana prIti viShayane (5)
Leave a Reply