Shesha devara Suladi – Abhinava Pranesha vittala

By Smt.Nandini Sripad , Blore

ಶ್ರೀ ಅಭಿನವ ಪ್ರಾಣೇಶವಿಠಲ ದಾಸಾರ್ಯ ಕೃತ
ಶ್ರೀ ಶೇಷದೇವರ ಸುಳಾದಿ

ರಾಗ: ಕಲ್ಯಾಣಿ

ಧ್ರುವತಾಳ
ವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರ |
ವಾರಿಣಿ ಕಳತ್ರ ಚಟುಲಗಾತ್ರ |
ವಾರಿಜನಾಭನ ಹಾಸುಗೆಯಾಗಿಯ –
ಪಾರ ಸೇವೆಗರೆವ ಶೇಷದೇವ |
ಧಾರುಣಿ ಪೊತ್ತು ಸರ್ವ ಜೀವರ ಸಲಹುವ |
ವೀರ ಕಾಕೋದರ ನೀಲಾಂಬರ |
ಈರೊಂದು ಸಹಸ್ರ ಜಿಹ್ವೆಗಳಿಂದ ನಿತ್ಯ |
ಮಾರಮಣನ ಗುಣ ಮಹಿಮೆ ಕೊಂಡಾಡುವ |
ವೀರ ವೈಷ್ಣವ ದೇವ ಚಕ್ಷುಸ್ರವ |
ಕಾರೊಡಲ ಅಭಿನವ ಪ್ರಾಣೇಶವಿಠಲನ |
ಚಾರು ಚರಣಾಬ್ಜಾಳಿ ಸರ್ಪಕುಲಮೌಳಿ || ೧ ||

ಮಟ್ಟತಾಳ
ನಾರಾಯಣನೊಡನೆ ಮೂರುತಿಯಲಿ ಸುಬ್ದ |
ಚಾರು ಬದರಿಯಲಿ ನೆಲೆಸಿದ ಅಹಿರಾಜ |
ಈರೊಂದು ಯುಗದಿ ಲಕ್ಷ್ಮಣ ನಾಮಕನು |
ಈರೈದು ರಥನ ಸುಮಿತ್ರೆಯ ಸುತನು |
ಮೂರನೆ ಯುಗದಲ್ಲಿ ಬಲರಾಮಾಭಿದನು |
ತಾರಾ ವಾಸುದೇವ ತನುಭವನೆನಿಸಿದನು |
ಕ್ಷೀರಜಾತೆ ಪತಿಯ ರುಕ್ಮಿಣೀಶ ಹರಿಯ |
ಭೂರಿ ಭಕುತಿಯಿಂದ ಸೇವಿಸಿ ಪೂಜಿಸುತ |
ಪಾರ ಪುಣ್ಯ ರಾಶಿ ಗಳಿಸಿದ ಮಹಾರಾಯ |
ಶ್ರೀರಮಣ ಅಭಿನವ ಪ್ರಾಣೇಶವಿಠಲನ |
ಚಾರು ಮಹಿಮಾಮೃತವ ಕರೆದುಣಿಸಿ ದೇವಾ || ೨ ||

ತ್ರಿವಿಡಿತಾಳ
ದ್ವಿತಿಯುಗದಲಿ ಸೀತಾಪತಿಯ ಅನುಜನಾಗಿ |
ಕ್ಷಿತಿಜಾಧವನ ಕೂಡ ವನಕೆ ಪೋಗಿ |
ಪತಿತ ಶಂಭೂಕ ಮೇಘನಾದ ಮುಖ್ಯರ ಕುಟ್ಟಿ |
ಕ್ಷಿತಿಭಾರ ಇಳಿಸುವ ಕಾರ್ಯ ಮಾಡಿ |
ಕ್ಷಿತಿಪತಿ ರಾಮನ ನೆರಳಂತೆಯನುಸರಿಸಿ |
ಸತತ ಸೇವೆಯಗರೆದ ಸೌಮಿತ್ರಿಯೇ |
ಕ್ಷಿತಿಧರ ಅಭಿನವ ಪ್ರಾಣೇಶವಿಠಲನ |
ಅತುಳ ನಾಮಾಮೃತವ ಗರೆದುಣಿಸು ದೇವಾ || ೩ ||

ಅಟ್ಟತಾಳ
ದ್ವಾಪರ ಯುಗದಲಿ ರುಕ್ಮಿಣೀಶಾಗ್ರಜ |
ಪಾಪಿ ಪ್ರಲಂಬ ಮುಷ್ಠಕ ಮುಖ್ಯ ದೈತ್ಯರ |
ಕಾಪುರುಷರ ಕುಟ್ಟಿ ಯಮಪುರಕಟ್ಟಿದೆ |
ಶ್ರೀಪತಿ ಕಲುಷನ ರಾಜ್ಯ ತಂತ್ರದಿಂದ |
ಕಾಪತಿ ಕುರುಪತಿ ನಿಲಯನ ಪೊಂದಲು |
ಸ್ಥಾಪಿಸಿ ಕರಿಪುರದೊಳು ಧರ್ಮರಾಜ್ಯವ |
ಭೂಪ ಧರ್ಮಜಗೆ ಪಟ್ಟವಗಟ್ಟಲು |
ಅಪಾರಾನಂದ ಸುಜನರಿಗಾಯಿತು |
ಶ್ರೀಪತಿ ಅಭಿನವ ಪ್ರಾಣೇಶವಿಠಲನ |
ರೂಪ ರಾಜ್ಯವ ನೋಡಿ ಪಾಡಿ ಹಿಗ್ಗುವ ದೇವ || ೪ ||

ಅದಿತಾಳ
ಹರಿಪರ್ಯಂಕನೆ ಹರಲಂಕಾರನೇ |
ಹರಿ ಹಯ ಸನ್ನುತ ಸುರಗಣ ಸೇವಿತ |
ಖರ ಯುಗದಲಿ ಯಾ ದೇಶವತಾರದಿ |
ಧರೆಯೊಳು ಜನಿಸಿದೆ ಮುಷ್ಕರ ಎನಿಸಿದೆ |
ಗುರು ಮಧ್ವಾರ್ಯರ ಸರ್ವ ಮೂಲಗಳ |
ಸರಳಾನುವಾದವ ವಿರಚಿಸಿ ಸುಜನಕೆ |
ಹರುಷವ ಬೀರಿದೆ ಕರುಣವ ತೋರಿದೆ |
ಶರಧರ ಅಭಿನವ ಪ್ರಾಣೇಶವಿಠಲನ |
ಚರಣ ಧ್ಯಾನದಿ ಮಾನ್ಯಖೇಡದಿಹ ಗುರುವೇ || ೫ ||

ಜತೆ
ಮಾನ್ಯ ಅಭಿನವ ಪ್ರಾಣೇಶವಿಠಲನ |
ಘನ ಭಜನೆಯ ನೀಡು ಪನ್ನಂಗ ದೇವ || ೬ ||


SrI aBinava prANESaviThala dAsArya kRuta
SrI SEShadEvara suLAdi

rAga: kalyANi

dhruvatALa
vArija Bavabomma kaSyapa kadru putra |
vAriNi kaLatra caTulagAtra |
vArijanABana hAsugeyAgiya –
pAra sEvegareva SEShadEva |
dhAruNi pottu sarva jIvara salahuva |
vIra kAkOdara nIlAMbara |
IroMdu sahasra jihvegaLiMda nitya |
mAramaNana guNa mahime koMDADuva |
vIra vaiShNava dEva cakShusrava |
kAroDala aBinava prANESaviThalana |
cAru caraNAbjALi sarpakulamauLi || 1 ||

maTTatALa
nArAyaNanoDane mUrutiyali subda |
cAru badariyali nelesida ahirAja |
IroMdu yugadi lakShmaNa nAmakanu |
Iraidu rathana sumitreya sutanu |
mUrane yugadalli balarAmABidanu |
tArA vAsudEva tanuBavanenisidanu |
kShIrajAte patiya rukmiNISa hariya |
BUri BakutiyiMda sEvisi pUjisuta |
pAra puNya rASi gaLisida mahArAya |
SrIramaNa aBinava prANESaviThalana |
cAru mahimAmRutava kareduNisi dEvA || 2 ||

triviDitALa
dvitiyugadali sItApatiya anujanAgi |
kShitijAdhavana kUDa vanake pOgi |
patita SaMBUka mEGanAda muKyara kuTTi |
kShitiBAra iLisuva kArya mADi |
kShitipati rAmana neraLaMteyanusarisi |
satata sEveyagareda saumitriyE |
kShitidhara aBinava prANESaviThalana |
atuLa nAmAmRutava gareduNisu dEvA || 3 ||

aTTatALa
dvApara yugadali rukmiNISAgraja |
pApi pralaMba muShThaka muKya daityara |
kApuruShara kuTTi yamapurakaTTide |
SrIpati kaluShana rAjya taMtradiMda |
kApati kurupati nilayana poMdalu |
sthApisi karipuradoLu dharmarAjyava |
BUpa dharmajage paTTavagaTTalu |
apArAnaMda sujanarigAyitu |
SrIpati aBinava prANESaviThalana |
rUpa rAjyava nODi pADi higguva dEva || 4 ||

aditALa
hariparyaMkane haralaMkAranE |
hari haya sannuta suragaNa sEvita |
Kara yugadali yA dESavatAradi |
dhareyoLu janiside muShkara eniside |
guru madhvAryara sarva mUlagaLa |
saraLAnuvAdava viracisi sujanake |
haruShava bIride karuNava tOride |
Saradhara aBinava prANESaviThalana |
caraNa dhyAnadi mAnyaKEDadiha guruvE || 5 ||

jate
mAnya aBinava prANESaviThalana |
Gana Bajaneya nIDu pannaMga dEva || 6 ||

Leave a Reply

Your email address will not be published. Required fields are marked *

You might also like

error: Content is protected !!