Composer : Shri Shyamasundara dasaru
ಪೋಷಿಸೆನ್ನನು ನಿರುತಶೇಷದೇವ |
ದೋಷ ನಾಶನಗೊಳಿಸಿಲೇಸಾಗಿ ಪಿಡಿ ಕರವ || ಪ||
ವನಧಿಶಯನಿಗೆ ತಲ್ಪಅನುಜ ಪೂರ್ವಜನಾ |
ಘನ ಸೇವೆಯನು ಗೈದಫಣಿರಾಜನೇ |
ವಿನಯದಲಿ ಬಿನ್ನೈಪೆನಿನಗ ಶನವಾದಾತ |
ಎನಗೊಲಿದು ಪೊರೆವಂತೆಅನುಗ್ರಹಿಸಿ ಅನುದಿನ || ೧ ||
ಭೂ ಗಗನ ಪಾತಾಳಸಾಗರವ ವ್ಯಾಪಿಸಿದ |
ಯೋಗ ಸಾಧನ ಶೂರನಾಗನಾಥ |
ಬಾಗಿ ಬೇಡುವೆ ಭವದರೋಗಕೌಷಧವಾದ |
ಭಾಗವತ ಶ್ರವಣ ಸುಖರಾಗದಲಿ ನೀ ಕೊಟ್ಟು || ೨ ||
ಸಾಸಿರಾಂಬಕ ನಮಿತಸಾಸಿರಾನನನಾದ |
ವಾಸುಕೀಪರ ವಾರುಣೀಶನಿನ್ನ |
ಹಾಸಿಗೆಯಗೈದಂಥಶ್ರೀ ಶ್ಯಾಮಸುಂದರನ |
ದಾಸರಾದವರ ಸಹವಾಸ ಪಾಲಿಸಿ ನಿತ್ಯ || ೩ ||
pOShisennanu niruta SEShadEva |
dOSha nASanagoLisi lEsAgi piDi karava || pa||
vanadhiSayanige talpa anuja pUrvajanA |
Gana sEveyanu gaida PaNirAjanE |
vinayadali binnaipe ninaga SanavAdAta |
enagolidu porevaMte anugrahisi anudina || 1 ||
BU gagana pAtALa sAgarava vyApisida |
yOga sAdhana SUra nAganAtha |
bAgi bEDuve Bavada rOgakauShadhavAda |
BAgavata SravaNa suKarAgadali nee koTTu || 2 ||
sAsirAMbaka namita sAsirAnananAda |
vAsukIpara vAruNISa ninna |
hAsigeyagaidaMtha SrI SyAmasuMdarana |
dAsarAdavara sahavAsa pAlisi nitya || 3 ||
Leave a Reply