Kruttivasana Rani

Composer : Shri Ramakanta vittala

By Smt.Shubhalakshmi Rao

ಕೃತ್ತಿವಾಸನ ರಾಣಿ ನಿತ್ಯದಲ್ಲಿ ಪ್ರಾರ್ಥಿಪುದು
ಕಾತ್ಯಾಯಿನಿ ಗೌರಿಯೇ |
ಪತ್ಯಂತರ್ಗತ ಹರಿಯ ಅತ್ಯಂತ ಭಕ್ತಿಯಲಿ
ಅರ್ಥಿಯಿಂ ಸ್ಮರಿಪ ತಾಯೇ ತಾಯೇ |ಪ|

ಹಿಂದೆ ದಕ್ಷಗೆ ನೀನು ನಂದನೆಯಳೆನಿಸಿ
ಬೆರೆದಿಂದು ಮೌಳಿಯ ಸುಖಿಸುತಾ |
ಬಂದು ಕರೆಯದೆ ಪತಿಯು ತಂದೆ
ಯಾಗವಗೈಯೆ ನೊಂದು ತ್ವರಿತದಿ ಸಾಗುತಾ |
ವೃಂದಿ ನೀ ಕುಂಡದೋಳ್ ನಿಂತು ಪೋಗಲು
ಶಿವನು ಅಂದು ಕೋಪವ ತಾಳುತಾ |
ಅಂದು ಬರೆ ದಕ್ಷಕನು ಮುಂದೆ
ಮೇನಕೆಯಾ ಬಸುರಿಂದಲಿ ಜನಿಸುತ್ತಾ, ನಿರುತ [೧]

ಜಡಿದು ಉಗ್ರ ತಪಗೈದು ಮೃಡ ದೇವರನ್ನೊಲಿಸಿ
ದೃಢ ಸೌಖ್ಯವನು ಹೊಂದಿದೇ |
ಒಡನೆ ಮುದದಲಿ ಪಡೆದ ಷಣ್ಮುಖನ
ದೆಸೆಯಿಂದ ಕಡು ದೈತ್ಯ ಬಾಧೆಯಳಿದೇ |
ಒಡ ಹುಟ್ಟಿದವಳಾಗಿ ಒಡೆಯ ಶ್ರೀರಾಮನ್ನ
ಬಿಡದೆ ಧ್ಯಾನವ ಬಿಡದೇ |
ಕಡಲ ಶಯನನ ಕೃಪೆಗೆ ಕಡು ಪಾತ್ರಳೆನಿಪ
ನಿನ್ನಡಿಗಳನು ನಾ ಸೇರಿದೆ, ಬಿಡದೇ [೨]

ಜಲಜಸಂಭವಗೆ ನೀ ಚೆಲುವ ಸೊಸೆಯೆಂದೆನಿಸಿ
ಕಲುಷ ವರ್ಜಿತಳಾದೆಯೇ |
ಬಳಲಿ ಪೊಳಲುತ ಭವದಿ ನೆಲೆಗಾಣದಲೇ
ಸಾದ್ವಿ ಬಳಿಗೆ ನೀ ಎನ್ನ ಕರೆಯೇ |
ಅಲ ಮನವ ಗೆಲುವಂಥ ಸುಲಭ
ಮಾರ್ಗವ ತೋರೇ ನಳಿನಾಕ್ಷಿ ಹರನ ಸತಿಯೇ |
ಸಲೆ ರಮಾಕಾಂತವಿಠಲನು ಹೃನ್ಮಂದಿರದಿ
ನಲಿವಂತೆ ಸಂತೈಸಿ ಪೊರೆಯೇ, ತಾಯೇ [೩]


kRuttivAsana rANi nityadalli prArthipudu
kAtyAyini gauriyE |
patyaMtargata hariya atyaMta Baktiyali
arthiyiM smaripa tAyE tAyE |pa|

hiMde dakShage nInu naMdaneyaLenisi
berediMdu mauLiya suKisutA |
baMdu kareyade patiyu taMde
yAgavagaiye noMdu tvaritadi sAgutA |
vRuMdi nI kuMDadOL niMtu pOgalu
Sivanu aMdu kOpava tALutA |
aMdu bare dakShakanu muMde
mEnakeyA basuriMdali janisuttA, niruta [1]

jaDidu ugra tapagaidu mRuDa dEvarannolisi
dRuDha sauKyavanu hoMdidE |
oDane mudadali paDeda ShaNmuKana
deseyiMda kaDu daitya bAdheyaLidE |
oDa huTTidavaLAgi oDeya SrIrAmanna
biDade dhyAnava biDadE |
kaDala Sayanana kRupege kaDu pAtraLenipa
ninnaDigaLanu nA sEride, biDadE [2]

jalajasaMBavage nI celuva soseyeMdenisi
kaluSha varjitaLAdeyE |
baLali poLaluta Bavadi nelegANadalE
sAdvi baLige nee enna kareyE |
ala manava geluvaMtha sulaBa
mArgava tOrE naLinAkShi harana satiyE |
sale ramAkAMtaviThalanu hRunmaMdiradi
nalivaMte saMtaisi poreyE, tAyE [3]

Leave a Reply

Your email address will not be published. Required fields are marked *

You might also like

error: Content is protected !!