Composer : Shri Harapanahalli Ramacharyaru [Indiresha ankita]
Shri Ibharamapura appavaru
Period – 1789-1869
Janma nama – Ibharamapura Krishnacharyaru
Upadesha Gurugalu – Rayaru (Svapna)
Place – Ibharamapura near Mantralaya
Punya Tithi – Shravana Shudda Triteeya
hanumantaarchakam soumyam raaGavEndrO gurO: priyam |
appEti naamnaa viKyaatam kRuShNaachaarya gurum bhajE |
ಶ್ರೀ ಅಪ್ಪಾವರ ಮೇಲೆ ಹರಪನಹಳ್ಳಿ ಶ್ರೀ ರಾಮಾಚಾರ್ಯರು ರಚಿಸಿದ ಕೃತಿ
( ಇಂದಿರೇಶ ಅಂಕಿತ )
ರಾಗ: ತೋಡಿ ಆದಿತಾಳ
ಕರುಣಾಸಾಗರರ ನೋಡಿದೆಯಾ , ಮಹಾ ।
ಪುರುಷರಿಗೊಂದಿಸಿ ವರವ ಬೇಡಿದೆಯಾ ॥ ಪ ॥
ಹರಿಭಕ್ತರಾಗ್ರಣಿಯ ಗುಣಗಳ ।
ಅರಿಯದವರು ಇವರನಾಡಿಕೊಂಡರೆ ।
ಕೊರತೆಯಾಗುವುದೇನು ಇಭರಾಮ – ।
ಪುರ ನಿಲಯ ಕೃಷ್ಣಾರ್ಯರ ॥ ಅ ಪ ॥
ಅವಾವ ಯೋಗಿಗಳವತಾರ ಎಂದು ।
ನಾ ವರ್ಣಿಸಲು ಪರಿಮಳ ಶರೀರ ।
ಸೇವಿಪ ಸುಜನ ಮಂದಾರ ತರು ।
ಪಾವನಾತ್ಮಕ ಪುಣ್ಯ ಪುರುಷ ಉದಾರ ॥
ಈ ವಿಧದ ಮಹಿಮೆಗಳು ಮ – ।
ತ್ತಾವ ನರರಿಗೆ ದೊರಕುವುದು ಶ್ರೀ – ।
ದೇವಿರಮಣ ಸಹಾಯದಿಂದ ಧ – ।
ರಾವಲಯದಿ ದಿಗ್ವಿಜಯ ಗೈಸಿದ ॥ 1 ॥
ಹರಿಯ ಧ್ಯಾನದೊಳಿದ್ದು ನಲಿವಾ ತನ್ನ ।
ಚರಣ ಸೇವಕರಿಗೆ ಸುಲಭದಿಂದೊಲಿವಾ ।
ದುರುಳ ದುಷ್ಕೃತಗಳಳಿವಾ ತನ್ನ – ।
ವರ ಸಮಯಕೆ ಸ್ವಪ್ನದಿ ಬಂದು ನಿಲುವಾ ॥
ಮರುತ ದೇವರು ಇವರ ಹೃನ್ಮಂ – ।
ದಿರದೊಳಗೆ ನೆಲೆಸಿ ನಿಜಾಭಿಮಾನದ – ।
ಲ್ಲಿರುವ ಕಾರಣದಿಂದಿವರ ಸಂ – ।
ದರುಶನವೇ ಸ್ವರ್ಗಾದಿ ಸಾಧನ ॥ 2 ॥
ದೋಷರಾಶಿಗಳೆಲ್ಲಾ ತರಿವಾ ತನ್ನ ।
ದಾಸ ಜನರಿಗೆ ಅಭೀಷ್ಠೆಯಗರೆವಾ ।
ತಾ ಸುರಿಸುತಾ ಸೌಖ್ಯಗರಿವಾ
ಇಂದಿರೇಶನ ಚರಣಾರಾಧಕರಾಗಿ ಮೆರೆವಾ ॥
ದೇಶ ದೇಶದಲ್ಲಿವರ ಕೀರುತಿ ।
ಸೂಸಿ ತುಂಬುವುದನ್ನು ತಿಳಿದು ನಿ – ।
ರ್ದೋಷಿಯಲಿ ಕುಹಕವನು ಕ – ।
ಲ್ಪಿಸಲಾಗುವುದರಿಂದವರಿಗೇನು ॥ 3 ॥
SrI appAvara mEle harapanahaLLi SrI rAmAcAryaru racisida kRuti
( iMdirESa aMkita ) rAga: tODi AditALa
karuNAsAgarara nODideyA , mahA |
puruSharigoMdisi varava bEDideyA || pa ||
hariBaktarAgraNiya guNagaLa |
ariyadavaru ivaranADikoMDare |
korateyAguvudEnu iBarAma – |
pura nilaya kRuShNAryara || a pa ||
avAva yOgigaLavatAra eMdu |
nA varNisalu parimaLa SarIra |
sEvipa sujana maMdAra taru |
pAvanAtmaka puNya puruSha udAra ||
I vidhada mahimegaLu ma – |
ttAva nararige dorakuvudu SrI – |
dEviramaNa sahAyadiMda dha – |
rAvalayadi digvijaya gaisida || 1 ||
hariya dhyAnadoLiddu nalivA tanna |
caraNa sEvakarige sulaBadiMdolivA |
duruLa duShkRutagaLaLivA tanna – |
vara samayake svapnadi baMdu niluvA ||
maruta dEvaru ivara hRunmaM – |
diradoLage nelesi nijABimAnada – |
lliruva kAraNadiMdivara saM – |
daruSanavE svargAdi sAdhana || 2 ||
dOSharASigaLellA tarivA tanna |
dAsa janarige aBIShTheyagarevA |
tA surisutA sauKyagarivA iMdirESana
caraNArAdhakarAgi merevA ||
dESa dESadallivara kIruti |
sUsi tuMbuvudannu tiLidu ni – |
rdOShiyali kuhakavanu ka – |
lpisalAguvudariMdavarigEnu || 3 ||
Leave a Reply