Composer : Shri Gopala dasaru
ಧ್ಯಾನವನೆ ಮಾಡು ಬಿಂಬ ಮೂರುತಿಯ
ಆನಂದದಲಿ ಕುಳಿತು ಅಂತರಂಗದಲಿ ||
ಸದಾಚಾರನಾಗಿ ದ್ವಾದಶ ಗುರುಗಳಿಗೆರಗಿ
ಮೊದಲಿಂದ ಮೂಲಮಂತ್ರವನು ಜಪಿಸೀ
ಸದಮಲಾ ಭಕುತಿಲಿ ದೇಹಸ್ಥನ ತಿಳಿದು
ಪದುಮಾಸನ ಹಾಕಿ ಪರಮ ವಿಶ್ವಾಸದಲ್ಲಿ ||೧||
ಅಂಗವನು ಚಲಿಸದೆ ಚಂದಾಗಿ ದೃಡದಿಂದ
ಕಂಗಳನು ಮುಚ್ಚಿ ಇಂದ್ರಿಯಂಗಳ ತೊರೆದು
ಮಂಗಳಾ ಶೋಭಿತದಿ ಅಖಂಡ ಧ್ಯಾನವನು ಅಂತ
ರಂಗದಿ ನಿಲಿಸಿ ಎಲ್ಲವನು ಕಾಣೋ ||೨||
ಭಗವದ್ರೂಪಗಳೆಲ್ಲ ವಂದು ಸಾರಿ ಸ್ಮರಿಸಿ
ಮಗುಳೆ ಪರಮಗುರುವಿನ ಮೂರ್ತಿಯನು
ತೆಗೆದು ಆಹ್ವಾನವೆ ಮಾಡಿ ಅಲ್ಲಿಂದಲೆ
ಸ್ವಗುರು ಬಿಂಬ ಮೂರುತಿಯಲಿ ಐಕ್ಯವನೆ ಮಾಡೋ ||೩||
ತಿರಗಿ ಮೆಲ್ಲಗೆ ಮೂರು ವೇಗದಿಂದಲಿ ನಿನ್ನ ನಿನ್ನ
ವರ ಮೂರ್ತಿಯಲಿ ಚಿಂತನೆಯ ಮಾಡೋ
ಭರದಿಂದ ಎಲ್ಲವನು ತಂದು ಹೃದಯದಲ್ಲಿ
ಸ್ಥಿರವಾಗಿ ಇಪ್ಪ ಮುರುತಿಯೊಡನೆ ಕೂಡಿಕೋ ||೪||
ಆತನೆ ಬಿಂಬ ಮೂರುತಿ ಯೆಂದು ತಿಳಿದುಕೋ
ಆ ತರುವಾಯ ನಾಡಿಗಳ ಗ್ರಹಿಸಿ
ಆ ತೈಜಸನ ತಂದು ವಿಶ್ವಮೂರುತಿಯಲ್ಲಿ
ಪ್ರೀತಿಯುಳ್ಳವನಾಗಿ ಪ್ರೀತಿಕರಿಸು ಮರುಳೆ ||೫||
ಜ್ಞಾನ ಪ್ರಕಾಶದಲಿ ನಿನ್ನ ಹೃದಯ
ಸ್ಥಾನ ಚನ್ನಗಿ ಅಷ್ಟದಳ ಕಮಲ ಮಧ್ಯ
ಶ್ರಿನಿವಾಸನ ಮುರ್ತಿ ನಿಲ್ಲಿಸಿ ಬಾಹ್ಯದಲಿ
ಏನೇನು ಪೂಜೆಗಳ ಅದನೆ ತಿಳಿದು ಮಾಡೋ ||೬||
ಗುಣ ನಾಲ್ಕರಿಂದ ಉಪಾಸನೆಯನು ಮಾಡು
ಕ್ಷಣ ಕ್ಷಣಕೆ ಹರಿ ರೂಪ ನೀ ನೋಡುತ
ಅಣುರೇಣು ಚೇತನಕೆ ತಾನೆ ನಿಯಾಮಕ
ಫಣಿಶಾಯಿ ಅಲ್ಲದೆ ಮತ್ತೊಬ್ಬರಿಲ್ಲವೆಂದು ||೭||
ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ
ಸಮ ವಿಷಯವ ತಿಳಿದು ಒಂದೇ ಭಕುತಿಯಲಿ
ಸಮಾಧಿಗೊಳಗಾಗಿ ದಿವ್ಯ ದೃಷ್ಟಿಯಲಿ
ಕ್ರಮದಿಂದ ಭರಿತ ಭಾವವನು ಕಾಣೋ ||೮||
ಈ ಪರಿ ಧೇನಿಸಲು ದೇವ ಕರುಣವ ಮಾಳ್ಪ
ಪಾಪ ಸಂಚಿತವು ಆಗಾಮಿ ನಾಶ
ಅಪರೋಕ್ಷಿತನಾಗಿ ನಿನ್ನ ಯೊಗ್ಯತೆ ಇದ್ದಷ್ಟು
ಗೊಪಾಲವಿಠಲನೊಲಿವನಾಗಾ ||೯||
dhyAnavane mADu biMba mUrutiya
AnaMdadali kuLitu aMtaraMgadali ||
sadAchAranAgi dvAdasha gurugaLigeragi
modaliMda mUlamaMtravanu japisI
sadamalA bhakutili dEhasthana tiLidu
padumAsana hAki parama vishvAsadalli ||1||
aMgavanu chalisade chaMdAgi dRuDadiMda
kaMgaLanu muchchi iMdriyaMgaLa toredu
maMgaLA shObhitadi akhaMDa dhyAnavanu aMta
raMgadi nilisi ellavanu kANO ||2||
bhagavadrUpagaLella vaMdu sAri smarisi
maguLe paramaguruvina mUrtiyanu
tegedu AhvAnave mADi alliMdale
svaguru biMba mUrutiyali aikyavane mADO ||3||
tiragi mellage mUru vEgadiMdali ninna ninna
vara mUrtiyali chiMtaneya mADO
bharadiMda ellavanu taMdu hRudayadalli
sthiravAgi ippa murutiyoDane kUDikO ||4||
Atane biMba mUruti yeMdu tiLidukO
A taruvAya nADigaLa grahisi
A taijasana taMdu vishvamUrutiyalli
preetiyuLLavanAgi preetikarisu maruLe ||5||
j~jAna prakAshadali ninna hRudaya
sthAna channagi aShTadaLa kamala madhya
shrinivAsana murti nillisi bAhyadali
EnEnu pUjegaLa adane tiLidu mADO ||6||
guNa nAlkariMda upAsaneyanu mADu
kShaNa kShaNake hari rUpa nee nODuta
aNurENu chEtanake tAne niyAmaka
phaNishAyi allade mattobbarillaveMdu ||7||
mamateyanu toredu mEloMdapEkShisade
sama viShayava tiLidu oMdE bhakutiyali
samAdhigoLagAgi divya dRuShTiyali
kramadiMda bharita bhAvavanu kANO ||8||
ee pari dhEnisalu dEva karuNava mALpa
pApa saMchitavu AgAmi nAsha
aparOkShitanAgi ninna yogyate iddaShTu
gopAla viThalanolivanAgA ||9||
Leave a Reply