Composer : Shri Vadirajaru
ನೆರೆನಂಬಿ ಪಡೆಯಿರೊ ಹಿತವ, ನಮ್ಮ
ಗುರು ಮಧ್ವಮುನಿಯ ಸಮ್ಮತವಾ ||ಪ||
ತ್ರೈತೆಯೋಳಂಜನೆ ತನಯಾನಾಗಿ
ಸೀತಾರಮಣ ರಘುಪತಿಗತಿ ಪ್ರೀಯಾ
ದೂತತನದಿ ಖಳತತಿಯ ಕೊಂದು
ಖ್ಯಾತಿ ಪಡೆದ ಹನುಮಂತನಾದ ಯತಿಯ ||೧||
ದ್ವಾಪರದಲಿ ಭೀಮನೆನಿಸಿ, ಪಾಂಡು-
ಭೂಪನರಸಿ ಕುಂತಿ ಉದರದಿ ಜನಿಸೀ
ಶ್ರೀಪತಿಗರ್ಥಿಯ ಸಲಿಸಿ ದೈತ್ಯ-
ರೂಪ ನೃಪನ ಕೊಂದ ಮುನಿಪನಾ ಭಜಿಸಿ ||೨||
ಕಲಿಯುಗದಲಿ ಯತಿಯಾಗಿ ಈ
ಇಳೆಯ ದುಸ್ಶಾಸ್ತ್ರವ ಜರಿದವರಾಗಿ
ಕುಲಗುರು ಮಧ್ವಪತಿ ಮುನಿಯೋಗಿ, ನಮ್ಮ
ಬಲು ಹಯವದನನ ಭಂಟನೆಂದು ಬಾಗಿ ||೩||
nerenaMbi paDeyiro hitava, namma
guru madhvamuniya sammatavA ||pa||
traiteyOLaMjane tanayAnAgi
sItAramaNa raGupatigati prIyA
dUtatanadi KaLatatiya koMdu
KyAti paDeda hanumaMtanAda yatiya ||1||
dvAparadali BImanenisi, pAMDu-
BUpanarasi kuMti udaradi janisI
SrIpatigarthiya salisi daitya-
rUpa nRupana koMda munipanA Bajisi ||2||
kaliyugadali yatiyAgi ee
iLeya dusshAstrava jaridavarAgi
kulaguru madhvapati muniyOgi, namma
balu hayavadanana BaMTaneMdu bAgi ||3||
Leave a Reply