Composer : Shri Gurujagannatha dasaru
ನಂದ ತೀರಥರಾಯ ಅಸ್ಮದ್ಗುರೋರ್ಗುರು
ನಂದ ಸುಖಮಯ ಕಾಯ ಪೊರೆಯಯ್ಯ ಜೀಯಾ [ಪ]
ನಂದನಂದನ ಪಾದ ಕಮಲಕೆ
ನಂದ ಮಧುಕರ ನಂದದಲಿ ನಿಜ
ಮಂದ ಜನರಿಗೆ ನಂದ ಕೊಡುವಾ
ನಂದ ಮೂರ್ತಿ ಆನಂದಕಾರಿಯೆ [ಅ.ಪ]
ಮಧ್ಯಮನಿ ದ್ವಿಜನಲ್ಲಿ, ಉದ್ಭವಿಸಿ ನೀನೂ
ಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ –
ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾ
ಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ |
ಶುದ್ಧ ಹರಿಮತದ ಶುಭ
ಸಿದ್ಧಾಂತ ಸ್ಥಾಪಿಸಿ ಜಗದಿ ಜೀವರ
ಸಿದ್ಧಗಣಕಧಿನಾಥನೆಂದೂ ಪ್ರ –
ಸಿದ್ಧಗೈಸಿದಿ ಶುದ್ಧ ಮೂರುತಿ [೧]
ಬದರಿಕಾಶ್ರಮವನ್ನು, ಐದಿದ್ಯೊ ಮುದದಿ
ಪದುಮನಾಭನನ್ನು, ಜಲಗೈಸಿ ನಿನ್ನ
ಬದಿಗ ಜನರಿಗಿನ್ನೂ, ಸುವಾಕ್ಯ
ದಿಂ-ದಲಿ ಪೇಳಿದದು ನಿಜವಿನ್ನು |
ಪದುಮನಾಭನೆ ಪರಮದೈವನು
ಪದುಮೆ ಮೊದಲು ಬ್ರಹ್ಮಾಂತ ಜೀವರ
ಪದದಿ ಗುಣದ ತಾರತಮ್ಯವ
ಹೃದಯ ಮಂದಿರದಲ್ಲಿ ಪೇಳಿದ [೨]
ಘನ್ನಮಹಿಮನೆ ಎನ್ನ, ಮನ ವಚನ ಕಾಯದಿ
ಇನ್ನು ಮಾಡುವುದನ್ನ ಸ್ವೀಕರಿಸಿ ಹರಿಗೆ
ಮುನ್ನ ನೀಡೆಲೊ ಚೆನ್ನ-ವಾಗಿ ನಿಜಫಲ
ನಿನ್ನ ಜನರೀಗಿನ್ನ, ನೀಡಯ್ಯ ಮುನ್ನ |
ನಿನ್ನ ಒಳಗೆ ನಿರುತ ಇರುವ
ಘನ್ನ ಗುರುಜಗನ್ನಾಥವಿಠ್ಠಲನ
ಎನ್ನ ಮನದಲಿ ತೋರಿಸೆಂದು
ನಿನ್ನ ಪದಯುಗವನ್ನು ಭಜಿಸಿದೆ [೩]
naMda tIratharAya asmadgurOrguru
naMda suKamaya kAya poreyayya jIyA [pa]
naMdanaMdana pAda kamalake
naMda madhukara naMdadali nija
maMda janarige naMda koDuvA
naMda mUrti AnaMdakAriye [a.pa]
madhyamani dvijanalli, udBavisi nInU
madhvamuni pesaralli durvAdigaLa a –
Suddha BAShyagaLalli jayapaDeda ninnA
Suddha BAShyagaLalli BaktiyiMdalli |
Suddha harimatada SuBa
siddhAMta sthApisi jagadi jIvara
siddhagaNakadhinAthaneMdU pra –
siddhagaisidi Suddha mUruti [1]
badarikASramavannu, aididyo mudadi
padumanABanannu, jalagaisi ninna
badiga janariginnU, suvAkya
diM-dali pELidadu nijavinnu |
padumanABane paramadaivanu
padume modalu brahmAMta jIvara
padadi guNada tAratamyava
hRudaya maMdiradalli pELida [2]
Gannamahimane enna, mana vacana kAyadi
innu mADuvudanna svIkarisi harige
munna nIDelo cenna-vAgi nijaPala
ninna janarIginna, nIDayya munna |
ninna oLage niruta iruva
Ganna gurujagannAthaviThThalana
enna manadali tOriseMdu
ninna padayugavannu Bajiside [3]
Leave a Reply