Madhwacharya Suladi – Purandaradasaru

By Smt.Nandini Sripad ,Blore

ಶ್ರೀ ಪುರಂದರದಾಸಾರ್ಯ ವಿರಚಿತ
ಶ್ರೀ ಮಧ್ವಾಚಾರ್ಯರ ಸುಳಾದಿ
ರಾಗ: ಕಲ್ಯಾಣಿ

ಧ್ರುವತಾಳ
ಒಬ್ಬ ಆಚಾರಿಯೆನೆ ದೈವವೇ ಇಲ್ಲವೆಂದ |
ಒಬ್ಬ ಆಚಾರಿಯೆನೆ ದೈವಕೆ ಎಂಟು ಗುಣವೆಂದ |
ಒಬ್ಬ ಆಚಾರಿಯೆನೆ ನಿರ್ಗುಣ ನಿರಾಕಾರ |
ನಿರವಯವನೆಂದ ಕಡೆಯಲಿ ತಾನೇ ದೈವವೆಂದ |
ಅವರೊಬ್ಬರೂ ವೇದಾರ್ಥವರಿತೂ ಅರಿಯರು |
ಇವರೊಬ್ಬರು ಶಾಸ್ತ್ರಾರ್ಥವರಿತೂ ಅರಿಯರು |
ಒಬ್ಬ ಮಧ್ವಾಚಾರಿಯನೆ ಪುರಂದರವಿಠಲನ |
ಒಬ್ಬನೇ ದೈವವೆಂದು ತೋರಿಕೊಟ್ಟರಾಗಿ || ೧ ||

ಮಟ್ಟತಾಳ
ಹರಿ ಪರದೇವತೆ ಎಂಬ ಜ್ಞಾನವೇ ಜ್ಞಾನ |
ಹರಿ ಅಡಿಗಳನೈದುವ ಮುಕುತಿಯೇ ಮುಕುತಿ |
ಹರಿ ವಿರಹಿತ ಜ್ಞಾನ ಮಿಥ್ಯಾಜ್ಞಾನ |
ಹರಿ ವಿರಹಿತ ಭಕುತಿ ಮಾತಿನ ಭಕುತಿ |
ಸಿರಿ ಮಧ್ವಾಚಾರ್ಯರೇ ಗುರುಗಳು ತ್ರೈಲೋಕಕೆ
ಪುರಂದರವಿಠಲನ ತೋರಿ ಕೊಟ್ಟರಾಗಿ || ೨ ||

ರೂಪಕತಾಳ
ಸೋಹಂ ಎಂದೆಂದು ಈ ಲೋಕವ
ಮೋಹಿಸುವವರ ನಿರಾಕರಿಸಿ ದಾ –
ಸೋಹಂ ಎಂಬ ರಹಸ್ಯವನರುಪಿದ
ಸೋಹಂ ಎಂಬ ಸಿರಿ ಪುರಂದರವಿಠಲನಾಳು
ಮಧ್ವಮುನಿ ದಾಸೋಹಂ ಎಂಬ || ೩ ||

ಝಂಪೆತಾಳ
ಏಕವಿಂಶತಿ ಕುಭಾಷ್ಯಕೆ ದೂಷಕನೆಂಬ ಬಿರುದು
ನಮ್ಮ ಗುರುರಾಯರಿಗಲ್ಲದುಂಟೆ |
ನಮ್ಮ ಕುಲಗುರು ಮಧ್ವಮುನಿಗಳಲ್ಲದುಂಟೆ
ಪುರಂದರವಿಠಲ ಪರನೆಂಬ ಸಿದ್ಧಾಂತ || ೪ ||

ತ್ರಿಪುಟತಾಳ
ವೈದಿಕ ಮತದಲ್ಲಿ ನಡೆದೆವೆಂದು ತಾವು
ವೈದಿಕವಂ ಬಿಟ್ಟುಕೊಟ್ಟರು ಕೆಲವರು |
ವೈಷ್ಣವ ಮತದಲ್ಲಿ ನಡದೆವೆಂದು ತಾವು
ವೈಷ್ಣವಂ ಬಿಟ್ಟು ಕೊಟ್ಟರು ಕೆಲವರು |
ವೈದಿಕ ವೈಷ್ಣವ ಒಂದೇ ಎಂದು ಮಧ್ವಮುನಿ
ಪ್ರತಿಪಾದಿಸಿದ ಪುರಂದರವಿಠಲ ಮೆಚ್ಚೆ || ೫ ||

ಅಟ್ಟತಾಳ
ಸುರತರು ಫಲಿಸಿರೆ ಎಲವದ ಮರ ಫಲಿಸಿಪ್ಪಂತೆ |
ಗುರುಗಳಾದರು ನೋಡ ಸಿರಿ ಪುರಂದರವಿಠಲನ
ತೋರಿದ ಮಧ್ವಾಚಾರ್ಯರು ಗುರುಗಳಾದರು ನೋಡ || ೬ ||

ಏಕತಾಳ
ಹರಿ ಪರಮಗುರು ಪರಮೇಷ್ಠಿ ಗುರು
ಸುರಗುರು ಮಧ್ವಾಚಾರ್ಯ ಚಕ್ರವರ್ತಿ
ಪುರಂದರವಿಠಲನ ದಯದಿಂದ || ೭ ||

ಜತೆ
ಪುರಂದರವಿಠಲಗೆ ಗುರುಮಧ್ವಾಚಾರ್ಯರಿಗೆ
ಶರಣು ಶರಣೆಂಬೆನೋ ಅನವರತ ||೮||


SrI puraMdaradAsArya viracita
SrI madhvAcAryara suLAdi
rAga: kalyANi

dhruvatALa
obba AcAriyene daivavE illaveMda |
obba AcAriyene daivake eMTu guNaveMda |
obba AcAriyene nirguNa nirAkAra |
niravayavaneMda kaDeyali tAnE daivaveMda |
avarobbarU vEdArthavaritU ariyaru |
ivarobbaru SAstrArthavaritU ariyaru |
obba madhvAcAriyane puraMdaraviThalana |
obbanE daivaveMdu tOrikoTTarAgi || 1 ||

maTTatALa
hari paradEvate eMba j~jAnavE j~jAna |
hari aDigaLanaiduva mukutiyE mukuti |
hari virahita j~jAna mithyAj~jAna |
hari virahita Bakuti mAtina Bakuti |
siri madhvAcAryarE gurugaLu trailOkake
puraMdaraviThalana tOri koTTarAgi || 2 ||

rUpakatALa
sOhaM eMdeMdu I lOkava
mOhisuvavara nirAkarisi dA –
sOhaM eMba rahasyavanarupida
sOhaM eMba siri puraMdaraviThalanALu
madhvamuni dAsOhaM eMba || 3 ||

JaMpetALa
EkaviMSati kuBAShyake dUShakaneMba birudu
namma gururAyarigalladuMTe |
namma kulaguru madhvamunigaLalladuMTe
puraMdaraviThala paraneMba siddhAMta || 4 ||

tripuTatALa
vaidika matadalli naDedeveMdu tAvu
vaidikavaM biTTukoTTaru kelavaru |
vaiShNava matadalli naDadeveMdu tAvu
vaiShNavaM biTTu koTTaru kelavaru |
vaidika vaiShNava oMdE eMdu madhvamuni
pratipAdisida puraMdaraviThala mecce || 5 ||

aTTatALa
surataru Palisire elavada mara PalisippaMte |
gurugaLAdaru nODa siri puraMdaraviThalana
tOrida madhvAcAryaru gurugaLAdaru nODa || 6 ||

EkatALa
hari paramaguru paramEShThi guru
suraguru madhvAcArya cakravarti
puraMdaraviThalana dayadiMda || 7 ||

jate
puraMdaraviThalage gurumadhvAcAryarige
SaraNu SaraNeMbenO anavarata ||8||

Leave a Reply

Your email address will not be published. Required fields are marked *

You might also like

error: Content is protected !!