Composer : Shri Vijayadasaru
ಶ್ರೀ ವಿಜಯದಾಸರ ಕೃತಿ
ರಾಗ: ಶಿವರಂಜಿನಿ ಖಂಡಛಾಪುತಾಳ
ಮಧ್ವಮುನಿ ಎನ್ನ ಹೃತ್ಕುಮುದ ಚಂದ್ರ || ಪ ||
ಅದ್ವೈತ ಮತಾರಣ್ಯ ದಹನ ಗುಣಸಾಂದ್ರ || ಅ ಪ ||
ನೊಂದೆ ಎಂಭತ್ತುನಾಲ್ಕು ಲಕ್ಷ ಯೋನಿಯಲ್ಲಿ |
ಒಂದೇ ಪ್ರಕಾರ ಸಂಚರಣೆಯಿಂದ ||
ಒಂದೊಂದು ಕರ್ಮವಾ ಅರಸಿ ನೋಡಿದೆ ಅದ – |
ರಿಂದ ಭವಾಬ್ಧಿಗೆ ವಂದುಪಾಯವ ಕಾಣೆ || ೧ ||
ನೀರು ಚಳಮಳ ಕಾಸಿ ಆರಲಿಟ್ಟು ಹೆಪ್ಪಾ |
ನೀರಿನಿಂದಲಿ ಕೊಡಲು ಬಪ್ಪುದೇನೂ ||
ಮಾರುತೀ ನಿನ್ನ ಕೃಪೆ ಪಡಿಯದಲೆ ಉಳಿದವರ |
ಕಾರುಣ್ಯವಾದರೂ ಮೋಕ್ಷ ಸಾಧನವಲ್ಲ || ೨ ||
ಹರಿಸಿರಿಗೆ ಎರಗುವಾ ಸತ್ವ ಶರೀರನೆ |
ನಿರುತ ಎನ್ನೊಳಗಿಪ್ಪ ಮುಖ್ಯ ಗುರುವೆ ||
ನೆರೆನಂಬಿದೆನೊ ಸ್ವಾಮಿ ವಿಜಯವಿಠ್ಠಲನ್ನ |
ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು || ೩ ||
SrI vijayadAsara kRuti
rAga: SivaraMjini KaMDaCAputALa
madhvamuni enna hRutkumuda caMdra || pa ||
advaita matAraNya dahana guNasAMdra || a pa ||
noMde eMBattunAlku lakSha yOniyalli |
oMdE prakAra saMcaraNeyiMda ||
oMdoMdu karmavA arasi nODide ada – |
riMda BavAbdhige vaMdupAyava kANe || 1 ||
nIru caLamaLa kAsi AraliTTu heppA |
nIriniMdali koDalu bappudEnU ||
mArutI ninna kRupe paDiyadale uLidavara |
kAruNyavAdarU mOkSha sAdhanavalla || 2 ||
harisirige eraguvA satva SarIrane |
niruta ennoLagippa muKya guruve ||
nerenaMbideno svAmi vijayaviThThalanna |
caraNadalliruvaMte sAdhyavAgali manasu || 3 ||
Leave a Reply