Composer : Shri Vijayadasaru
ಶ್ರೀ ವಿಜಯದಾಸರ ರಚನೆ , ರಾಗ: ಶಂಕರಾಭರಣ , ಆದಿತಾಳ
ಎಂತು ವರ್ಣಿಪೆನಮ್ಮಮ್ಮ ಈ ಗುರುಗಳ
ಎಂತು ಸ್ತುತಿಪೆನಮ್ಮಮ್ಮ ॥ ಪ ॥
ಯಂತ್ರೋದ್ಧಾರಕನಾಗಿ ಇಂತು ಮೆರೆವ ಯತಿಯ ॥ ಅ ಪ ॥
ಕೋತಿ ರೂಪದಲಿ ಬಂದು ಭೂತಳಕ್ಕೆ ಬೆಡಗು ತೋರಿ ।
ತುಂಗಭದ್ರ ತೀರದಲ್ಲಿ ಖ್ಯಾತಿಯಾಗಿಪ್ಪ ಯತಿಯ ॥ 1 ॥
ಸುತ್ತಲು ವಾನರ ಬದ್ಧ ಮತ್ತೆ ವಲಯಾಕಾರ ।
ಚಿತ್ರಕೋಣ ಮಧ್ಯ ಅದರೊಳ್ ನಿತ್ಯದಲ್ಲಿ ಯಿಪ್ಪ ಯತಿಯ ॥ 2 ॥
ವ್ಯಾಸಮುನಿರಾಯರಿಂದ ಈ ಶಿಲೆಯೊಳಗೆ ನಿಂದು ।
ಶ್ರೀಶ ವಿಜಯವಿಠ್ಠಲನ್ನ ಏಸು ಬಗೆ ತುತಿಪನ್ನ ॥ 3 ॥
eMtu varNipenammamma I gurugaLa
eMtu stutipenammamma || pa ||
yaMtrOddhArakanAgi iMtu mereva yatiya || a pa ||
kOti rUpadali baMdu BUtaLakke beDagu tOri |
tuMgaBadra tIradalli KyAtiyAgippa yatiya || 1 ||
suttalu vAnara baddha matte valayAkAra |
citrakONa madhya adaroL nityadalli yippa yatiya || 2 ||
vyAsamunirAyariMda I SileyoLage niMdu |
SrISa vijayaviThThalanna Esu bage tutipanna || 3 ||
Leave a Reply