Composer : Shri Vadirajaru
ಈತನೆ ಕಾಣಿರೊ ಮಧ್ವಮುನಿ || ಪ ||
ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ- |
ಸರಿಯಂತೆ ಚರಿಸುತ್ತ ||
ಹರಿಯೇ ಸರ್ವೋತ್ತಮನೆಂಬ ಘೋಷಗಳಿಂದ |
ದುರುಳ ವಾದಿಗಳೆಂಬ ನರಿಗಳೋಡಿಸಿದಾತ || ೧ ||
ಸಕಲಾಗಮಗಳೆಂಬ ಶರಧಿಯೊಳಗೆ |
ಯುಕುತಿಯಿಂದಲಿ ಮಥಿಸಿ ||
ಅಕಳಂಕ ಶ್ರೀಹರಿಯೆಂಬ ರತ್ನವ ಕಂಡು |
ಮುಕುಟದೊಳಿಟ್ಟು ಲೋಕದಿ ಮೆರೆಸಿದಾತ || ೨ ||
ವೇದಸಾರವೆಂಬ ಈಶ ತತ್ತ್ವವಾದ |
ಸುಧೆಯ ಕಲ್ಪಿಸಿಕೊಂಡು ||
ಆದಿಮೂರುತಿ ಶ್ರೀಹಯವದನನ ದಿವ್ಯ – |
ಪಾದ ಸೇವಕನಾದ ಮಧ್ವಮುನಿಯೆಂಬಾತ || ೩ ||
Itane kANiro madhvamuni || pa ||
paripari SrutigaLeMba guhegaLali kE- |
sariyaMte carisutta ||
hariyE sarvOttamaneMba GOShagaLiMda |
duruLa vAdigaLeMba narigaLODisidAta || 1 ||
sakalAgamagaLeMba SaradhiyoLage |
yukutiyiMdali mathisi ||
akaLaMka SrIhariyeMba ratnava kaMDu |
mukuTadoLiTTu lOkadi meresidAta || 2 ||
vEdasAraveMba ISa tattvavAda |
sudheya kalpisikoMDu ||
AdimUruti SrIhayavadanana divya – |
pAda sEvakanAda madhvamuniyeMbAta || 3 ||
Leave a Reply