Avataratraya Suladi – Shri Rayaru

By Smt.Nandini Sripad , Blore

ಅವತಾರತ್ರಯ ಮುಖ್ಯಪ್ರಾಣ ದೇವರ ಸುಳಾದಿ

ರಾಗ: ಯಮನ್ ಕಲ್ಯಾಣಿ, ಧ್ರುವತಾಳ

ಮರುತ ನಿನ್ನಯ ಮಹಿಮೆ ಪರಿ ಪರಿಯಿಂದ ತಿಳಿದು |
ಚರಿಸಿದ ಮನುಜನಿಗೆ ದುರಿತ ಬಾಧೆಗಳ್ಯಾಕೆ |
ಸರಸಿಜಾಸನ ಸಮ ಸಿರಿ ದೇವಿ ಗುರುವೆಂದು |
ಪರತತ್ತ್ವ ಹರಿಯೆನುತ ನಿರುತ ವಂದಿಸಿ ಅಖಿಲ |
ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ |
ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ|
ಸರಿಬಂದ ವ್ಯಾಪಾರದಿ ಆಡಿಸುವೆ ಜಡ ಜೀವರನು |
ಪುರಹರ ಮೊದಲಾಗಿ ತೃಣ ಜೀವಕಡೆಯಾಗಿ |
ಅರಿಯರು ಒಂದು ಕಾರ್ಯ ಗುರುವೆ ನಿನ್ನ ಹೊರತು |
ಹೊರಗೆ ಗೊಂಬೆಗಳ ತೋರಿ ಒಳಗೆ ಥರಥರದಿ ನೀನು|
ಇರುವೆ ಸರ್ವರಿಗೆ ಆಧಾರ ರೂಪದಿ ಅತಿ |
ಸ್ಥಿರ ಭಕುತಿಯಿಂದ ಹರಿಯ ಧೇನಿಸುತ |
ಮಿರುಗುವ ಪ್ರಭೆ ನಿನ್ನದು ವದರುವ ಧ್ವನಿ ನಿನ್ನದು |
ಬರುವ ಹೋಗುವ ವ್ಯಾಪಾರ ನಿನ್ನದು ದೇವ |
ಭರದಿ ಶರಧಿ ಶಯನ ಸಿರಿ ವೇಣುಗೋಪಾಲರೇಯ |
ಪರಮ ಹರುಷದಿ ಲೀಲಾ ತೋರುವ ನಿನ್ನೊಳಿದ್ದು || ೧ ||

ಮಟ್ಟತಾಳ

ಅಖಿಲಾಗಮ ವೇದ್ಯ ಅಖಿಲಾಗಮ ಸ್ತುತ್ಯ |
ಅಖಿಲಾಗಮ ನಿಗಮ ವ್ಯಾಪುತದೇವನೆ |
ಅಖಿಲರೊಳಗೆ ನಿಂದು ಸಕಲ ಕಾರ್ಯಗಳೆಲ್ಲ |
ಅಕುಟಿಲ ನೀನಾಗಿ ಮಾಡಿಸಿ ಮೋದದಿಂದ |
ಯುಕುತಿಯಿಂದ ಜಗದ ಅತಿಶಯವ ತಿಳಿದು |
ಲಕುಮಿಯನು ನೀನು ಕಾಣುವೆ ಸರ್ವದಾ |
ಭಕುತರೊಳಗೆ ನಿನ್ನ ತುತಿಸ ಬಲ್ಲವರಾರು |
ಭಕುತಿಗಭಿಮಾನಿ ಭಾರತಿಗಳವಲ್ಲ |
ಭೃಕುಟವಂದಿತ ನೀನು ವೇಣುಗೋಪಾಲನ |
ಪ್ರಕಟದಿ ಬಲ್ಲದ್ದು ಅರಿಯರು ಉಳಿದದ್ದು || ೨ ||

ತ್ರಿಪುಟತಾಳ

ಪೃಥ್ವಿ ಶಬ್ದಾದಿ ಭೂತ ಮಾತ್ರಾ ಪರಿಮಾಣುಗಳಲ್ಲಿ |
ಪ್ರತಿಪ್ರತಿ ರೂಪನಾಗಿ ಇರುತಿಪ್ಪೆ ಮಡದಿ ಸಹಿತ ಪ್ರಾ – |
ಕೃತ ವಿಡಿದು ಸಕಲ ವ್ಯಾಪ್ತ ತಾತ್ವಿಕರಲ್ಲಿ ವ್ಯಾಪಾರ |
ನಿನ್ನದಯ್ಯ ಲೋಕ ವಂದಿತ ದೇವ |
ಶಾತಕುಂಭಾದಿಯಿಂದ ಬೊಮ್ಮಾಂಡವು ತಾಳ |
ನಿನಗೆ ಎಣೆಯೆನುತ ತೋರುವುದಯ್ಯ ಶ್ರೀ – |
ಕಾಂತನಾದ ಸಿರಿ ವೇಣುಗೋಪಾಲನು |
ಪ್ರಿತಿಯಿಂದಲಿ ನಿನಗೆ ಒಲಿದೆ ಅಧಿಕನಾಗಿ || ೩ ||

ಅಟ್ಟತಾಳ

ಇರುತಿ ಜಗದ ಆಧಾರಕನಾಗಿ |
ಇರುತಿದ್ದು ಧಾರುಣಿಯೊಳಗೆ |
ಮೂರು ಅವತಾರಗಳ ಧರಿಸಿ |
ಕ್ರೂರರ ಸದೆದೆದ್ದು ಮೀರಿದ ಕಾರ್ಯವೆ |
ಮೇರು ನುಂಗುವನಿಗೆ ಒಂದು ಚೂರು ನುಂಗಲು |
ಶೂರತನವು ಏನೋ ಆರು ಬಣ್ಣುಪರೋ ವಿ -|
ಚಾರಿಸಿ ನಿನ್ನನು ನಾರಾಯಣ ಕೃಷ್ಣ ವೇಣುಗೋಪಾಲನ ಆ – |
ಧಾರದಿಂದಲಿ ಸೇವೆ ಬಾರಿ ಬಾರಿಗೆ ಮಾಳ್ಪೆ || ೪ ||

ಆದಿತಾಳ

ಒಂದು ಅವತಾರದಲಿ ಕೊಂದೆ ರಕ್ಕಸರ ಮ – |
ತ್ತೊಂದು ಅವತಾರದಿ ಅಸುರ ವೃಂದ ಘಾತಿಸಿದೆ |
ನಂದತೀರ್ಥ ರೂಪದಿಂದ ಸಕಲರಂದ ವಚನಗಳ ಕಡಿದು |
ನಂದದಲ್ಲಿ ಮೆರೆದೆ ತಂದೆ ಈ ಕೃತಿಗಳು |
ನಿನ್ನಿಂದಾದದ್ದು ನೋಡಿ ಮಂದರೋದ್ಧಾರ ಸುಖಿಸುವ ಸಪುತದ್ವೀಪ |
ಸಿಂಧು ಸಪುತ ಏಕದಿಂದ ಹಾರುವನು |
ಮುಂದಿದ್ದ ಕಾಲುವೆಯ ನಿಂದು ನಿಂದು ತಾ
ದಾಟಿದಂತೆ ಮಂದಮತಿಗಳ ಮನಕೆ ಏನೆಂಬೆ ಎಲೋ ದೇವ |
ಸುಂದರಾಂಗನೆ ಸುಖದಿಂದ ಪೂರಿತ ವಾಯು – |
ನಂದನ ಹನುಮ ರಾಮನಿಂದಾಲಿಂಗನವ ಪಡೆದೆ |
ಬಂದು ವಂದಿಸಿದೆ ಗೋಪಿಕಂದಗೆ ಭೀಮ |
ನಂದಮೂರುತಿ ವ್ಯಾಸನಿಂದ ತತ್ತ್ವಗಳೆಲ್ಲ |
ಅಂದದಿ ಓದುವ ಅಮರೇಂದ್ರ ವಂದಿತ ಮಧ್ವ |
ತಂದೆ ಎನ್ನ ಬಿನ್ನಹ ಒಂದು ಲಾಲಿಸುವುದು |
ಪೊಂದಿ ಭೂಪತಿಯ ಮನದಿಚ್ಛೆ ಬೇಡಿದಂತೆ |
ಇಂದು ಬೇಡುವೆ ಮನದಿಂದ ವಂದನೆ ಮಾಡುವೆ |
ಕುಂದದೆ ಎನ್ನೊಳಿಪ್ಪ ಮಂದಮತಿ ಕಳೆವಾದೆಂದು |
ಇಂದೀವರಾಕ್ಷ ಹೃದಯ ಮಂದಿರದೊಳು ನಿನ್ನ |
ಅಂದವಾದ ರೂಪ ಇಂದು ತೋರುವುದೆನಗೆ |
ಸಿಂಧುಶಯನ ಸಿರಿ ವೇಣುಗೋಪಾಲನು |
ನಿಂದು ನಿನ್ನೊಳು ಲೀಲಾ ಒಂದೊಂದು ಮಾಳ್ಪ ಚಿತ್ರ || ೫ ||

ಜತೆ

ಪವನ ನಿನ್ನಯ ಪಾದ ಪೊಂದಿದ ಮನುಜನು |
ಜವನಪುರಕ್ಕೆ ಸಲ್ಲ ವೇಣುಗೋಪಾಲ ಬಲ್ಲ ||


avatAratraya muKyaprANa dEvara suLAdi

rAga: yaman kalyANi, dhruvatALa

maruta ninnaya mahime pari pariyiMda tiLidu |
carisida manujanige durita bAdhegaLyAke |
sarasijAsana sama siri dEvi guruveMdu |
paratattva hariyenuta niruta vaMdisi aKila |
BaritanAgippe jagadi arasi BArati sahita |
horagidda navArNavadoLage jIvara bIja|
saribaMda vyApAradi ADisuve jaDa jIvaranu |
purahara modalAgi tRuNa jIvakaDeyAgi |
ariyaru oMdu kArya guruve ninna horatu |
horage goMbegaLa tOri oLage tharatharadi nInu|
iruve sarvarige AdhAra rUpadi ati |
sthira BakutiyiMda hariya dhEnisuta |
miruguva praBe ninnadu vadaruva dhvani ninnadu |
baruva hOguva vyApAra ninnadu dEva |
Baradi Saradhi Sayana siri vENugOpAlarEya |
parama haruShadi lIlA tOruva ninnoLiddu || 1 ||

maTTatALa

aKilAgama vEdya aKilAgama stutya |
aKilAgama nigama vyAputadEvane |
aKilaroLage niMdu sakala kAryagaLella |
akuTila nInAgi mADisi mOdadiMda |
yukutiyiMda jagada atiSayava tiLidu |
lakumiyanu nInu kANuve sarvadA |
BakutaroLage ninna tutisa ballavarAru |
BakutigaBimAni BAratigaLavalla |
BRukuTavaMdita nInu vENugOpAlana |
prakaTadi balladdu ariyaru uLidaddu || 2 ||

tripuTatALa

pRuthvi SabdAdi BUta mAtrA parimANugaLalli |
pratiprati rUpanAgi irutippe maDadi sahita prA – |
kRuta viDidu sakala vyApta tAtvikaralli vyApAra |
ninnadayya lOka vaMdita dEva |
SAtakuMBAdiyiMda bommAMDavu tALa |
ninage eNeyenuta tOruvudayya SrI – |
kAMtanAda siri vENugOpAlanu |
pritiyiMdali ninage olide adhikanAgi || 3 ||

aTTatALa

iruti jagada AdhArakanAgi |
irutiddu dhAruNiyoLage |
mUru avatAragaLa dharisi |
krUrara sadededdu mIrida kAryave |
mEru nuMguvanige oMdu cUru nuMgalu |
SUratanavu EnO Aru baNNuparO vi -|
cArisi ninnanu nArAyaNa kRuShNa vENugOpAlana A – |
dhAradiMdali sEve bAri bArige mALpe || 4 ||

AditALa

oMdu avatAradali koMde rakkasara ma – |
ttoMdu avatAradi asura vRuMda GAtiside |
naMdatIrtha rUpadiMda sakalaraMda vacanagaLa kaDidu |
naMdadalli merede taMde I kRutigaLu |
ninniMdAdaddu nODi maMdarOddhAra suKisuva saputadvIpa |
siMdhu saputa EkadiMda hAruvanu |
muMdidda kAluveya niMdu niMdu tA
dATidaMte maMdamatigaLa manake EneMbe elO dEva |
suMdarAMgane suKadiMda pUrita vAyu – |
naMdana hanuma rAmaniMdAliMganava paDede |
baMdu vaMdiside gOpikaMdage BIma |
naMdamUruti vyAsaniMda tattvagaLella |
aMdadi Oduva amarEMdra vaMdita madhva |
taMde enna binnaha oMdu lAlisuvudu |
poMdi BUpatiya manadicCe bEDidaMte |
iMdu bEDuve manadiMda vaMdane mADuve |
kuMdade ennoLippa maMdamati kaLevAdeMdu |
iMdIvarAkSha hRudaya maMdiradoLu ninna |
aMdavAda rUpa iMdu tOruvudenage |
siMdhuSayana siri vENugOpAlanu |
niMdu ninnoLu lIlA oMdoMdu mALpa citra || 5 ||

jate

pavana ninnaya pAda poMdida manujanu |
javanapurakke salla vENugOpAla balla ||

Leave a Reply

Your email address will not be published. Required fields are marked *

You might also like

error: Content is protected !!