Composer : Shri Vijayadasaru
ನಿನ್ನನ್ನೇ ನಂಬಿದೆ ಅನ್ಯರೊಬ್ಬರ ಕಾಣೆ | ಗುರು
ಮಧ್ವಮುನಿರಾಯಾ || ಪ ||
ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಗುರು
ಮಧ್ವಮುನಿರಾಯಾ ||ಅ ಪ||
ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು | ಗುರು
ಮಧ್ವಮುನಿರಾಯಾ |
ಗತಿಯ ಕಲ್ಪಿಸಿ ಸಜ್ಜನ ತತಿಗಳ ಕಾಯ್ದೆ | ಗುರು
ಮಧ್ವಮುನಿರಾಯಾ ||೧||
ತಂದೆ ತಾಯಿ ಬಂಧು ಬಳಗ ಎಲ್ಲವು ನೀನೆ | ಗುರು
ಮಧ್ವಮುನಿರಾಯಾ |
ಎಂದೆಂದಿಗೂ ನಿನ್ನ ಪೊಂದಿರುವಂತೆ ಮಾಡೈ | ಗುರು
ಮಧ್ವಮುನಿರಾಯಾ ||೨||
ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ |ಗುರು
ಮಧ್ವಮುನಿರಾಯಾ |
ಆನಂದಮುನಿಯೆಂದು ನೀನು ಹೆಸರು ಪೊತ್ತೆಯೊ | ಗುರು
ಮಧ್ವಮುನಿರಾಯಾ ||೩||
ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಗುರು
ಮಧ್ವಮುನಿರಾಯಾ |
ಮೂಲ ಮೂವತ್ತೇಳು ಮೇಲು ಗ್ರಂಥಗಳನಿತ್ತೆ | ಗುರು
ಮಧ್ವಮುನಿರಾಯಾ ||೪||
ಅಜಪದಕೆ ಬಂದು ಅಖಿಲರ ಪಾಲಿಪ | ಗುರು
ಮಧ್ವಮುನಿರಾಯಾ |
ವಿಜಯಸಾರಥಿ ಕೃಷ್ಣ ವಿಜಯವಿಠ್ಠಲ ಪ್ರಿಯ | ಗುರು
ಮಧ್ವಮುನಿರಾಯಾ ||೫||
ninnannE naMbide anyarobbara kANe | guru
madhvamunirAyA || pa ||
nimma siddhAMtadi manava nillisayya | guru
madhvamunirAyA ||a pa||
patita saMkara puTTi matavella keDisalu | guru
madhvamunirAyA |
gatiya kalpisi sajjana tatigaLa kAyde | guru
madhvamunirAyA ||1||
taMde tAyi baMdhu baLaga ellavu nIne | guru
madhvamunirAyA |
eMdeMdigU ninna poMdiruvaMte mADai | guru
madhvamunirAyA ||2||
SrInidhi kRuShNane jagakella doreyeMba |guru
madhvamunirAyA |
AnaMdamuniyeMdu nInu hesaru potteyo | guru
madhvamunirAyA ||3||
bAlakRuShNana sEve mElAgi mADuva | guru
madhvamunirAyA |
mUla mUvattELu mElu graMthagaLanitte | guru
madhvamunirAyA ||4||
ajapadake baMdu aKilara pAlipa | guru
madhvamunirAyA |
vijayasArathi kRuShNa vijayaviThThala priya | guru
madhvamunirAyA ||5||
Leave a Reply