Bidade ninnadigalige

Composer : Shri Prasannavenkata dasaru [on Budamaladoddi Prana devaru]

By Smt.Shubhalakshmi Rao

ಬಿಡದೆ ನಿನ್ನಡಿಗಳಿಗೆ ಪೊಡಮಡುವೆನಯ್ಯಾ |
ಬಿಡು ಕಣ್ಣಯೆನ್ನೆಡೆಗೆ ಬುಡುಮಲದೊಡ್ಡಿ ಜೀಯಾ [ಪ]

ಒಡೆಯನ್ನ ಮಡದಿಗೋಸುಗ ಧೀರತ್ವದಿಂದಾ |
ಕಡಲಹಾರಿ ಬಲುಗಡಸುತನ ತೋರಿ ನಿಂದಾ ||
ಬುಡ ಮೇಲು ಮಾಡಿದೆ ಕಡುದೈತ್ಯನ ಪುರವ |
ಚೂಡಾಮಣಿಯೊಡನೆ ತಂದಿಟ್ಟೆ ಮನವಾರ್ತೆ [೧]

ಮುಡಿಸಿ ಸೌಗಂಧಿಕ ಮುಡಿಗೆ ಅಜ್ಞಾತದಲಿ |
ಅಡುಗೆ ಮಾಡುವನಂತೆ ವೇಷ ಧರಿಸಿದೆ ||
ಬೆಡಗಿನ ಹೆಣ್ಣಾಗಿ ಕೊಡವಿ ಕೊಂದಸುರನ್ನ |
ಕೆಡುಕಿನಾ ಕೌರವರ ಹುಟ್ಟಡಗಿಸಿ ಮೆರೆದೆ [೨]

ಒಡನೆ ಮರುತ ಮತ ಸಿದ್ಧಾಂತ ಮಂಡಿಸಿ |
ತುಡುಕಾಡುತಲಿದ್ದ ಬುಧ ಜನರ ಪೊರೆದೆ |
ಎಡಬಿಡಂಗಿ ವಾದಿಗಳ ದುರ್ನಡತೆಕೊಡಹಿದಾ |
ಕಡಲಶಯ್ಯಾ ಪ್ರಸನ್ವೆಂಕಟನ ದೃಢ ಭಕುತ [೩]


biDade ninnaDigaLige poDamaDuvenayyA |
biDu kaNNayenneDege buDumaladoDDi jIyA [pa]

oDeyanna maDadigOsuga dhIratvadiMdA |
kaDalahAri balugaDasutana tOri niMdA ||
buDa mElu mADide kaDudaityana purava |
cUDAmaNiyoDane taMdiTTe manavArte [1]

muDisi saugaMdhika muDige aj~jAtadali |
aDuge mADuvanaMte vESha dhariside ||
beDagina heNNAgi koDavi koMdasuranna |
keDukinA kauravara huTTaDagisi merede [2]

oDane maruta mata siddhAMta maMDisi |
tuDukADutalidda budha janara porede |
eDabiDaMgi vAdigaLa durnaDatekoDahidA |
kaDalaSayyA prasanveMkaTana dRuDha Bakuta [3]

Leave a Reply

Your email address will not be published. Required fields are marked *

You might also like

error: Content is protected !!