Composer : Shri Prasannavenkata dasaru [on Bommagatta Hulikunte Prana devaru]
ಭಳಿರೆ ಭಳಿರೆ ಹನುಮಂತರಾಯಾ |
ಭಳಿರೆ ಹುಲಿಕುಂಟೆ ಮಾರುತಿರಾಯಾ [ಪ]
ನಳಿರುನಾಭನಳಿಲು ಸೇವೆಲಿ ದಿನ |
ಕಳೆಯುತಿರುವ ಬಲ ಭೀಮರಾಯಾ [ಅ.ಪ]
ಅತಿತ ರಾಮಗತಿ ಪ್ರೀತಾವಾತಸುತಾ |
ವೃತ ನೇಮಕೆ ಖ್ಯಾತಾ ಬಲವಂತಾ ||
ಕ್ಷಿತಿ ಮೇಲೆತ್ತುತ ಮೂರಾವತಾರತಾ |
ಪತಿತರನುದ್ದರಿಸಿದ ಶ್ರೀಹರಿದೂತಾ [೧]
ಆಗಮಸಾರ ಸರಾಗಗೊಳಿಸಿ ಘನ |
ಉದ್ಗ್ರಂಥಗಳಿಂಜಗ ಪೊರೆದಾ ಗುರು ||
ಯೋಗಿಯಾಗಿ ಸಾಗರ ಶಯನನ ಪದ |
ಯುಗಗಳ ಭಜಿಸಿದ ಭಾಗವತೋತ್ತಮ [೨]
ದ್ವೈತಾಗತ ಮಹತ್ ತ್ವಮತ |
ಸತ್ವವ ತಿಳಿಸಿದ ಸುಖತೀರಥನಿಧಿ ||
ಸಾತ್ವತಾಂಪತಿ ಪ್ರಸನ್ವೆಂಕಟಕೃಷ್ಣನ |
ನಿತ್ಯತುತಿಪಾ ಮೂರ್ತರೂಪಯತಿ [೩]
BaLire BaLire hanumaMtarAyA |
BaLire hulikuMTe mArutirAyA [pa]
naLirunABanaLilu sEveli dina |
kaLeyutiruva bala BImarAyA [a.pa]
atita rAmagati prItAvAtasutA |
vRuta nEmake KyAtA balavaMtA ||
kShiti mElettuta mUrAvatAratA |
patitaranuddarisida SrIharidUtA [1]
AgamasAra sarAgagoLisi Gana |
udgraMthagaLiMjaga poredA guru ||
yOgiyAgi sAgara Sayanana pada |
yugagaLa Bajisida BAgavatOttama [2]
dvaitAgata mahat tvamata |
satvava tiLisida suKatIrathanidhi ||
sAtvatAMpati prasanveMkaTakRuShNana |
nityatutipA mUrtarUpayati [3]
Leave a Reply