Composer : Shri Prasannavenkata dasaru [Sanoor Prana devaru near Karkala]
ಸಾಣೂರ ಪ್ರಾಣಾ ನಿನ್ನ ಮಹಿಮೆಗಳಿಗೆ |
ಎಣೆಗಾಣೆ ಈ ಕ್ಷೋಣಿಯೊಳಗೆ [ಪ]
ಜಾಣೆ ಜಾನಕಿಗೆರಗಿ ಮುದ್ರಿಕೆಯನಿತ್ತು |
ಹಣ್ಣಿನೆಂಜಲವೈದೆ ರಾವಣನೆಡೆಗೆ
ಕ್ಷಣದಲಿ ಸಂಜೀವಿನಿಯ ತಂದಿಳಿಸಿ |
ಪ್ರಾಣಪಕ್ಷಿಯ ತಡೆದೆ ಲಕ್ಷ್ಮಣಾದಿಗಳಲ್ಲಿ [೧]
ವುಣ್ಣಿಸಿದ ವಿಷವನರಗಿಸಿಕೊಂಡು ಕೀಚಕಗೆ |
ಹೆಣ್ಣಾಗಿ ಜರಿದೆ ಜವ್ವನೆಯರ ಮದವಾ |
ಕಣ್ಣಿಟ್ಟು ಕಾಂತೆಯನು ಚೆನ್ನಾಗಿ ಸಲಹಿದಾ |
ಗುಣವಂತ ಕೃಷ್ಣನ್ನ ದಾಸಾನುದಾಸಾ [೨]
ಮಣಿಮಂತ ಮೊದಲಾದ ದುರ್ವಾದಿಗಳ
ಮಣಿಸಿ ಮೆರೆದೆ ಈ ಊರ್ವಿಯೊಳಗೆ |
ಸ್ಥಾಣುರೇತಃ ಪ್ರಸನ್ವೆಂಕಟರಾಯನ್ನ |
ತಾಣ ತಿಳಿದ ಹನುಮ ಭೀಮ ಗುರುವರ್ಯ [೩]
sANUra prANA ninna mahimegaLige |
eNegANe I kShONiyoLage [pa]
jANe jAnakigeragi mudrikeyanittu |
haNNineMjalavaide rAvaNaneDege
kShaNadali saMjIviniya taMdiLisi |
prANapakShiya taDede lakShmaNAdigaLalli [1]
vuNNisida viShavanaragisikoMDu kIcakage |
heNNAgi jaride javvaneyara madavA |
kaNNiTTu kAMteyanu cennAgi salahidA |
guNavaMta kRuShNanna dAsAnudAsA [2]
maNimaMta modalAda durvAdigaLa
maNisi merede I UrviyoLage |
sthANurEtaH prasanveMkaTarAyanna |
tANa tiLida hanuma BIma guruvarya [3]
Leave a Reply